ಕೊಳ್ಳೇಗಾಲ: ಪಟ್ಟಣದ ಎರಡು ಖಾಸಗಿ ಶಾಲೆಯ ನಾಲ್ವರು ಶಿಕ್ಷಕರು, ಓರ್ವ ನೌಕರ ಹಾಗೂ ಇಬ್ಬರು ಮಕ್ಕಳು ಸೇರಿದಂತೆ 7 ಮಂದಿಗೆ ಕೊರೊನಾ ದೃಢಪಟ್ಟಿದೆ.
ಇಲ್ಲಿನ ಮಾನಸ ಶಿಕ್ಷಣ ವಿದ್ಯಾ ಸಂಸ್ಥೆಯ ಪ್ರೌಢಶಾಲೆಯ ಮುಖ್ಯ ಶಿಕ್ಷಕರಿಗೆ ಕೊರೊನಾ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಸಹೋದ್ಯೋಗಿಗಳು ಹಾಗು ಮಕ್ಕಳಿಗೆ ರ್ಯಾಪಿಡ್ ಟೆಸ್ಟ್ ಮಾಡಿದ ಬಳಿಕ ಇಬ್ಬರು ಶಿಕ್ಷಕರಿಗೆ ಸೋಂಕು ತಗುಲಿರುವುದು ಗೊತ್ತಾಗಿದೆ.
ಹಾಗೆಯೇ, ಚೌಡೇಶ್ವರಿ ವಿದ್ಯಾಸಂಸ್ಥೆಯ ಶಿಕ್ಷಕರೊಬ್ಬರಿಗೆ ಸೋಂಕು ಕಾಣಿಸಿಕೊಂಡಿದ್ದು ಸಂಪರ್ಕದಲ್ಲಿದ್ದವರಿಗೆ ಆರ್.ಟಿ.ಪಿ.ಸಿ.ಆರ್ ಟೆಸ್ಟ್ ಮಾಡಿದ್ದು ಓರ್ವ ನೌಕರ ಹಾಗು ಇಬ್ಬರು ಮಕ್ಕಳಿಗೆ ಕೋವಿಡ್ ತಗುಲಿದೆ.
ಶಾಲಾ ಆಡಳಿತ ವರ್ಗ ಎರಡು ಶಾಲೆಗಳಿಗೂ ಎರಡು ದಿನಗಳ ಕಾಲ ರಜೆ ಘೋಷಿಸಿದ್ದು, ಸೋಂಕು ಕಾಣಿಸಿಕೊಂಡ ಪರಿಣಾಮ ಶಾಲೆಯನ್ನು ಸಾನಿಟೈಸ್ ಮಾಡುವಂತೆ ಬಿಇಒ ಚಂದ್ರಪಾಟೀಲ್ ಸೂಚಿಸಿದ್ಧಾರೆ.
ಇದನ್ನೂಓದಿ:ಸೂಪರ್ ಸ್ಪ್ರೆಡರ್ ಭೀತಿಯಿಂದ ಕಾಂಗ್ರೆಸ್ ಪಾದಯಾತ್ರೆ ಮೊಟಕು; ಹಲವರಿಗೆ ಕೊರೊನಾಘಾತ