ಚಾಮರಾಜನಗರ: ಇಂದು 10 ಮಂದಿ ಪೊಲೀಸರು ಸೇರಿದಂತೆ ಚಾಮರಾಜನಗರ ಜಿಲ್ಲೆಯಲ್ಲಿ ಒಟ್ಟು 86 ಕೋವಿಡ್ ಕೇಸ್ ದೃಢಪಟ್ಟಿದೆ. ಈ ಮುಖೇನ ಸಕ್ರಿಯ ಪ್ರಕರಣಗಳ ಸಂಖ್ಯೆ 174ಕ್ಕೆ ಏರಿಕೆಯಾಗಿದ್ದು, ದಿನದಿಂದ ದಿನಕ್ಕೆ ಹೊಸ ಪ್ರಕರಣಗಳು ದ್ವಿಗುಣಗೊಳ್ಳುತ್ತಿವೆ.
ದಾಖಲಾದ 86 ಕೇಸುಗಳಲ್ಲಿ ಗುಂಡ್ಲುಪೇಟೆ ಪಿಐ ಸೇರಿದಂತೆ 8 ಮಂದಿ, ಚಾಮರಾಜನಗರ ಹಾಗೂ ಕೊಳ್ಳೇಗಾಲದಲ್ಲಿ ತಲಾ ಓರ್ವ ಪೊಲೀಸ್ ಸಿಬ್ಬಂದಿಗೆ ಸೋಂಕು ದೃಢಪಟ್ಟಿದ್ದು, ಎಲ್ಲರೂ ಸೌಮ್ಯ ರೋಗ ಲಕ್ಷಣ ಹೊಂದಿದ್ದಾರೆ. ಇಂದು 6 ಮಂದಿ ಮಕ್ಕಳಲ್ಲೂ ಸೋಂಕು ಕಾಣಿಸಿದೆ. 174 ಮಂದಿಯಲ್ಲಿ ಐವರನ್ನು ಮಾತ್ರ ಹೋಂ ಐಸೋಲೇಷನ್ನಲ್ಲಿಟ್ಟಿದ್ದು ಉಳಿದವರು ಕೋವಿಡ್ ಆರೈಕೆ ಕೇಂದ್ರಗಳಲ್ಲಿದ್ದಾರೆ.