ಚಾಮರಾಜನಗರ:ಜಿಲ್ಲೆಯಲ್ಲಿಂದು 61 ಕೋವಿಡ್ ಪಾಸಿಟಿವ್ ಕೇಸ್ ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 3886ಕ್ಕೆ ಏರಿಕೆಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ.
ಚಾಮರಾಜನಗರ: 61 ಜನರಿಗೆ ಕೋವಿಡ್ ದೃಢ...41 ಮಂದಿ ಗುಣಮುಖ... - ಚಾಮರಾಜನಗರ ಕೋವಿಡ್ ಸುದ್ದಿ 2020
ಚಾಮರಾಜನಗರ ಜಿಲ್ಲೆಯಲ್ಲಿ ಒಟ್ಟು 41 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ.
ಚಾಮರಾಜನಗರ
ಜಿಲ್ಲೆಯಲ್ಲಿ ಒಟ್ಟು 41 ಮಂದಿ ಗುಣಮುಖರಾಗುವ ಮೂಲಕ ಸಕ್ರೀಯ ಪ್ರಕರಣಗಳ ಸಂಖ್ಯೆ 651ಕ್ಕೆ ತಲುಪಿದೆ. 45 ಮಂದಿ ಸೋಂಕಿತರು ಐಸಿಯುನಲ್ಲಿದ್ದು 310 ಮಂದಿ ಹೋಂ ಐಸೋಲೇಷನ್ ನಲ್ಲಿದ್ದಾರೆ.
ತಾಲೂಕಿನ ಬಡಗಲಪುರ ಗ್ರಾಮದ 62 ವರ್ಷದ ವ್ಯಕ್ತಿ ಕಳೆದ 17 ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಮೃತಪಟ್ಟಿದ್ದಾರೆ. ಹನೂರು ತಾಲೂಕಿನ ಹಲಗಾಪುರ ಗ್ರಾಮದ 70 ವರ್ಷದ ವೃದ್ಧೆ 26 ರಂದು ಹೃದಯಾಘಾತದಿಂದ ಮೃತಪಟ್ಟಿದ್ದು ನಿಧನದ ನಂತರ ಕೊರೊನಾ ಇರುವುದು ಖಾತ್ರಿಯಾಗಿದೆ.