ಕೊಳ್ಳೇಗಾಲ (ಚಾಮರಾಜನಗರ):ಕೊಳ್ಳೇಗಾಲ ಪೊಲೀಸ್ ಠಾಣೆ ವತಿಯಿಂದ ಸಾರ್ವಜನಿಕರಿಗೆ ಕೊರೊನಾ ಜಾಗೃತಿ ಮೂಡಿಸಲಾಯಿತು.
ಕೊಳ್ಳೇಗಾಲ ಪೊಲೀಸರಿಂದ ಕೊರೊನಾ ಜಾಗೃತಿ: ಸಾರ್ವಜನಿಕರಿಗೆ ಉಚಿತ ಮಾಸ್ಕ್ ವಿತರಣೆ - ಕೊರೊನಾ ಜಾಗೃತಿ'
ಕೊಳ್ಳೇಗಾಲ ಪೊಲೀಸ್ ಠಾಣೆ ವತಿಯಿಂದ ಸಾರ್ವಜನಿಕರಿಗೆ ಕೊರೊನಾ ಜಾಗೃತಿ ಮೂಡಿಸುವ ಜೊತೆಗೆ ಉಚಿತ ಮಾಸ್ಕ್ ವಿತರಣೆ ಮಾಡಲಾಯಿತು.
![ಕೊಳ್ಳೇಗಾಲ ಪೊಲೀಸರಿಂದ ಕೊರೊನಾ ಜಾಗೃತಿ: ಸಾರ್ವಜನಿಕರಿಗೆ ಉಚಿತ ಮಾಸ್ಕ್ ವಿತರಣೆ Corona Awareness by kollegal police](https://etvbharatimages.akamaized.net/etvbharat/prod-images/768-512-9270942-thumbnail-3x2-sow.jpg)
ಪಿಎಸ್ಐ ತಾಜುದ್ದಿನ್ ನೇತೃತ್ವದಲ್ಲಿ ರೇಷ್ಮೆ ಮಾರುಕಟ್ಟೆ, ಅಂಗಡಿಗಳು, ಪ್ರಮುಖ ವೃತ್ತಗಳಿಗೆ ತೆರಳಿ ಉಚಿತ ಮಾಸ್ಕ್ ವಿತರಿಸಲಾಯಿತು. ಜೊತೆಗೆ ಕೊರೊನಾ ಮಹಾಮಾರಿಯಿಂದ ತಮ್ಮನ್ನು ಮತ್ತು ಸಮಾಜವನ್ನು ರಕ್ಷಿಸುವ ಜವಾಬ್ಧಾರಿ ಹೊರುತ್ತೇವೆ ಎಂಬ ಪ್ರತಿಜ್ಞೆಯನ್ನು ಮಾಡಿಸಿಕೊಂಡು ಸ್ಯಾನಿಟೈಸರ್, ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗುತ್ತಿದೆ.
ಇನ್ನು, ಬೀದಿಬದಿ ವ್ಯಾಪಾರಿಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಕೊರೊನಾ ಟೆಸ್ಟ್ ಮಾಡಿಸಲು ಕೊಳ್ಳೇಗಾಲ ಪೊಲೀಸರು ಮುಂದಾಗಿದ್ದಾರೆ. ಮಹಿಳಾ ಪೊಲೀಸ್ ಠಾಣೆ, ಕೊಳ್ಳೇಗಾಲ ಗ್ರಾಮಾಂತರ ಠಾಣೆ, ಗುಂಡ್ಲುಪೇಟೆ ಠಾಣೆಯ ವತಿಯಿಂದಲೂ ಕೂಡ ಕೊರೊನಾ ಜಾಗೃತಿ ಕಾರ್ಯಕ್ರಮ ನಡೆಯುತ್ತಿದೆ.