ಕರ್ನಾಟಕ

karnataka

ETV Bharat / state

ಕೊಳ್ಳೇಗಾಲ ತಾಲೂಕಿನ ಗಡಿಯಲ್ಲಿ ಚೆಕ್ ಪೋಸ್ಟ್‌ ನಿರ್ಮಾಣ: ತೀವ್ರ ಕಟ್ಟೆಚ್ಚರ - Weekend curfew

ರಾಜ್ಯಾದ್ಯಂತ ಇಂದು‌ ರಾತ್ರಿ 9 ಗಂಟೆಯಿಂದ ಜಾರಿಯಲ್ಲಿರುವ ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಹಾಗೂ ಮೈಸೂರು ಮಾರ್ಗದ ಟಗರಪುರ ರಸ್ತೆಯಲ್ಲಿ ಚೆಕ್ ಪೋಸ್ಟ್‌ ತೆರೆಯಲಾಗಿದೆ.

Kollegala
ಕೊಳ್ಳೇಗಾಲ ತಾಲೂಕಿನ ಗಡಿಯಲ್ಲಿ ಚೆಕ್ ಪೋಸ್ಟ್‌ ನಿರ್ಮಾಣ

By

Published : Apr 24, 2021, 9:22 AM IST

ಕೊಳ್ಳೇಗಾಲ (ಚಾಮರಾಜನಗರ):ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವುದರಿಂದ ರಾಜ್ಯಾದ್ಯಂತ ಇಂದು‌ ರಾತ್ರಿ 9 ಗಂಟೆಯಿಂದ ಜಾರಿಯಲ್ಲಿರುವ ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ತಾಲೂಕಿನ ಗಡಿಯಲ್ಲಿ ಚೆಕ್ ಪೋಸ್ಟ್ ತೆರೆಯಲಾಗಿದ್ದು, ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಕೊಳ್ಳೇಗಾಲ ತಾಲೂಕಿನ ಗಡಿಯಲ್ಲಿ ಚೆಕ್ ಪೋಸ್ಟ್‌ ನಿರ್ಮಾಣ

ಕೊಳ್ಳೇಗಾಲತಾಲೂಕಿನ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಹಾಗು ಮೈಸೂರು ಮಾರ್ಗದ ಟಗರಪುರ ರಸ್ತೆಯಲ್ಲಿ ಚೆಕ್ ಪೋಸ್ಟ್‌ ತೆರೆಯಲಾಗಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ತುರ್ತು ಸೇವೆಗಳ ವಾಹನಗಳ‌ನ್ನು ಹೊರತು‌ಪಡಿಸಿ, ಸುಖಾಸುಮ್ಮನೆ ಓಡಾಡುವವರ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತದೆ.

ಪ್ರತಿ ಚೆಕ್ ಪೋಸ್ಟ್​​ನಲ್ಲಿ ಓರ್ವ ಎಎಸ್ಐ ಸೇರಿದಂತೆ 4 ಮಂದಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಏಪ್ರಿಲ್​ 23ರ ರಾತ್ರಿ 9 ಗಂಟೆಯಿಂದ ಏ. 26ರ ಬೆಳಗ್ಗೆವರೆಗೂ ಚೆಕ್ ಪೋಸ್ಟ್ ಕಾರ್ಯ ನಿರ್ವಹಿಸಲಿದ್ದು, 2 ಪಾಳಿಯಲ್ಲಿ ದಿನದ 24 ಗಂಟೆಗಳ ಕಾಲ ಪೊಲೀಸರು ಕಾರ್ಯ ನಿರ್ವಹಿಸಲಿದ್ದಾರೆ.

ಅಗತ್ಯ ಸೇವೆಗಳ ಗೂಡ್ಸ್ ವಾಹನಗಳು, ಆ್ಯಂಬುಲೆನ್ಸ್, ಆರೋಗ್ಯ ತುರ್ತು ವಾಹನಗಳಿಗೆ ನಿರ್ಬಂಧವಿರುವುದಿಲ್ಲ. ವಾಹನಗಳಲ್ಲಿ ಕಡ್ಡಾಯ ಮಾಸ್ಕ್ ಧಾರಣೆ ಹಾಗೂ ಸಾಮಾಜಿಕ ಅಂತರವನ್ನು ಪಾಲಿಸಬೇಕಿದೆ.

ಓದಿ:ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್‌ ಅಟ್ಟಹಾಸ; ಒಂದೇ ದಿನ 348 ಮಂದಿ ಸೋಂಕಿಗೆ ಬಲಿ

ABOUT THE AUTHOR

...view details