ಕರ್ನಾಟಕ

karnataka

ETV Bharat / state

ಅರ್ಥಶಾಸ್ತ್ರದಲ್ಲಿ 4 ಚಿನ್ನದ ಪದಕ, 7 ನಗದು ಬಹುಮಾನ ಪಡೆದ ಕಾನ್ಸ್‌ಟೇಬಲ್ ಕಾವೇರಿ - ಪಿಎಸ್ಐ ಕೆಪಿಎಸ್​ಸಿ ಪರೀಕ್ಷೆಗೆ ತಯಾರಿ

ಆರ್ಥಿಕ ಮುಗ್ಗಟ್ಟಿನ ನಡುವೆಯೂ ಆಸ್ಥೆಯಿಟ್ಟು ಓದಿದ ಇವರು ಪದವಿ ಪರೀಕ್ಷೆ ಬಳಿಕ ಕಾನ್ಸ್‌ಟೇಬಲ್ ಹುದ್ದೆಗೆ ನೇಮಕವಾಗಿದ್ದರು. ಇದೀಗ ಬಿಎ ಅರ್ಥಶಾಸ್ತ್ರದಲ್ಲಿ ನಾಲ್ಕು ಚಿನ್ನದ ಪದಕ ಪಡೆದ ಈ ಸ್ವರ್ಣ ಹುಡುಗಿಗೆ ಎಂ.ಎ. ಓದಲು ಆರ್ಥಿಕ ಸಮಸ್ಯೆ ಎದುರಾಗಿದ್ದರಿಂದ ನೌಕರಿ ಮಾಡುತ್ತಲೇ ಪಿಎಸ್ಐ ಜೊತೆಗೆ ಕೆಪಿಎಸ್​ಸಿ ಪರೀಕ್ಷೆಗಳನ್ನು ಬರೆಯಲು ತಯಾರಿ ನಡೆಸುತ್ತಿದ್ದಾರೆ.

topper
topper

By

Published : Oct 20, 2020, 6:11 PM IST

ಚಾಮರಾಜನಗರ: ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರು ಮೈಸೂರು ವಿವಿಯ ಬಿಎ ಅರ್ಥಶಾಸ್ತ್ರ ವಿಷಯದಲ್ಲಿ ನಾಲ್ಕು ಚಿನ್ನದ ಪದಕ ಹಾಗೂ 7 ನಗದು ಬಹುಮಾನಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಚಾಮರಾಜನರದಲ್ಲಿ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ತರಬೇತಿ ಪಡೆಯುತ್ತಿರುವ ನಂಜನಗೂಡು ತಾಲೂಕಿನ ಕೂಡ್ಲಾಪುರ ಗ್ರಾಮದ ಬೆಳ್ಳಶೆಟ್ಟಿ ಎಂಬುವರ ಮಗಳು ಕಾವೇರಿ ನಂಜನಗೂಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಬಡತನದಲ್ಲೂ ಅರಳಿದ ಪ್ರತಿಭೆಯಾಗಿದ್ದಾರೆ.

ಅರ್ಥಶಾಸ್ತ್ರದಲ್ಲಿ ಚಿನ್ನದ ಪದಕ ಪಡೆದ ಕಾನ್ಸ್‌ಟೇಬಲ್

ತಂದೆ ರೈತರಾಗಿದ್ದು ಆರ್ಥಿಕ ಮುಗ್ಗಟ್ಟಿನ ನಡುವೆ ಆಸ್ಥೆಯಿಟ್ಟು ಓದಿದ ಕಾವೇರಿ ಪದವಿ ಪರೀಕ್ಷೆ ಬಳಿಕ ಕಾನ್ಸ್‌ಟೇಬಲ್ ಆಗಿ ನೇಮಕವಾಗಿದ್ದರು. ನಾಲ್ಕು ಸ್ವರ್ಣ ಪದಕ ಪಡೆದ ಈ ಚಿನ್ನದ ಹುಡುಗಿಗೆ ಎಂ.ಎ ಓದಲು ಆರ್ಥಿಕ ಸಮಸ್ಯೆ ಎದುರಾಗಿದ್ದರಿಂದ ನೌಕರಿ ಮಾಡುತ್ತಲೇ ಪಿಎಸ್ಐ ಜೊತೆಗೆ ಕೆಪಿಎಸ್​ಸಿ ಪರೀಕ್ಷೆಗಳನ್ನು ಬರೆಯಲು ತಯಾರಿ ನಡೆಸುತ್ತಿದ್ದಾರೆ.

ಚಿನ್ನದ ಹುಡುಗಿ ಕುರಿತು ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಪ್ರತಿಕ್ರಿಯಿಸಿ, ಬಿಎ ಅರ್ಥಶಾಸ್ತ್ರದಲ್ಲಿ ವಿಶ್ವವಿದ್ಯಾಲಯಕ್ಕೆ ಟಾಪರ್ ಆಗುವ ಮೂಲಕ ಇಲಾಖೆಗೆ ಕಾವೇರಿ ಕೀರ್ತಿ ತಂದಿದ್ದಾರೆ. ಕಾನ್ಸ್‌ಟೇಬಲ್ ಹುದ್ದೆಯಲ್ಲೇ ಮುಂದುವರಿಯದೇ ಪಿಎಸ್ಐ, ಕೆಎಎಸ್ ಪರೀಕ್ಷೆಗಳನ್ನು ಅವರು ತೆಗೆದುಕೊಳ್ಳಬೇಕು. ಅವರಿಗೆ ಉಜ್ವಲ ಭವಿಷ್ಯವಿದೆ ಎಂದು ಅಭಿನಂದಿಸಿದರು.

ಕಾವೇರಿ ಚಿನ್ನದ ಪದಕ ಪಡೆದಿರುವುದಕ್ಕೆ ಸಹೋದ್ಯೋಗಿಗಳು ಕೂಡ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ. ವಿದ್ಯೆಗೆ ಹಣ - ಆಸ್ತಿಗಿಂತ ಕಠಿಣ ಪರಿಶ್ರಮ, ಶ್ರದ್ಧೆ ಮುಖ್ಯ ಎಂಬುದಕ್ಕೆ ಕಾವೇರಿ ನಿದರ್ಶನವಾಗಿದ್ದಾರೆ.

ABOUT THE AUTHOR

...view details