ಕರ್ನಾಟಕ

karnataka

ETV Bharat / state

ಹೊಸವರ್ಷದ ಬಂದೋಬಸ್ತ್‌ ಮುಗಿಸಿ ಹಿಂತಿರುಗುವಾಗ ಸಾವನ್ನಪ್ಪಿದ ಪೊಲೀಸ್ ಪೇದೆ - ಚಾಮರಾಜನಗರ ಸುದ್ದಿ ಪೊಲೀಸ್​ ಪೇದೆ ಸಾವಿನ ಸುದ್ದಿ

ಕರ್ತವ್ಯ ನಿರ್ವಹಿಸಿ ಹಿಂತಿರುಗುವಾಗ ಬೈಕ್​ನಿಂದ ಬಿದ್ದ ಪೊಲೀಸ್​ ಪೇದೆ ಮೃತಪಟ್ಟಿರುವ ಘಟನೆ ಕೊಳ್ಳೇಗಾಲ ಮುಖ್ಯರಸ್ತೆಯ ಹರಳೆ ಬಳಿ ನಡೆದಿದೆ.

chamarajanagara
ಸಾವನ್ನಪ್ಪಿದ ಪೇದೆ

By

Published : Jan 1, 2020, 10:20 AM IST

ಚಾಮರಾಜನಗರ:ಹೊಸವರ್ಷ ಸಂಭ್ರಮಾಚರಣೆಯ ಬಂದೋಬಸ್ತ್ ಕರ್ತವ್ಯ ನಿರ್ವಹಿಸಿ ಹಿಂತಿರುಗುವಾಗ ಆಯತಪ್ಪಿ ಬೈಕ್​ನಿಂದ ಬಿದ್ದ ಪೊಲೀಸ್​ ಪೇದೆ ಮೃತಪಟ್ಟಿರುವ ಘಟನೆ ಕೊಳ್ಳೇಗಾಲ ಮುಖ್ಯರಸ್ತೆಯ ಹರಳೆ ಬಳಿ ನಡೆದಿದೆ.

ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆರ್​.ಎಸ್. ದೊಡ್ಡಿ ಗ್ರಾಮದ ಸಿದ್ದರಾಜು ಘಟನೆಯಲ್ಲಿ ಮೃತಪಟ್ಟವರು.

ಇವರನ್ನು ಹೊಸ ವರ್ಷ ಸಂಭ್ರಮಾಚರಣೆಯ ಬಿಗಿ ಬಂದೋಬಸ್ತ್​ಗಾಗಿ ನರೀಪುರ ಪಾಯಿಂಟ್​ಗೆ ನಿಯೋಜಿಸಲಾಗಿತ್ತು.‌ ರಾತ್ರಿ ಕರ್ತವ್ಯ ಮುಗಿಸಿ ಹಿಂತಿರುಗುವಾಗ ರಸ್ತೆ ಗುಂಡಿಯಲ್ಲಿ ಬೈಕ್ ನಿಯಂತ್ರಣ ತಪ್ಪಿದೆ. ಪರಿಣಾಮ ಪಕ್ಕದ ಚಾನಲ್​ಗೆ ಬೈಕ್ ಸಮೇತ ಅವರು ಬಿದ್ದಿದ್ದಾರೆ.

ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದು, ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details