ಕರ್ನಾಟಕ

karnataka

ETV Bharat / state

ಸಚಿವರಿಗಾಗಿ ಕಾದು ಕಾದು ಸುಸ್ತಾದ ಶಾಸಕರು: ದಿಢೀರ್ ಕಾರ್ಯಕ್ರಮ ರದ್ದು ಪಡಿಸಿದ ಈಶ್ವರಪ್ಪ - ಈಶ್ವರಪ್ಪ ವಿರುದ್ಧ ಆಕ್ರೋ ಶ ವ್ಯಕ್ತಪಡಿಸಿದ ಕಾಂಗ್ರೆಸ್ ಶಾಸಕರು

ಇಂದು ಚಾಮರಾಜನಗರದ ಜಿ.ಪಂ. ಸಭಾಂಗಣ ಪಕ್ಕದಲ್ಲಿನ ಕ್ಷೇಮ ಕೇಂದ್ರ ಉದ್ಘಾಟನೆಗಾಗಿ ಸಚಿವ ಈಶ್ವರಪ್ಪ ಅವರನ್ನು ಆಹ್ವಾನ ಮಾಡಲಾಗಿತ್ತು. ಆದರೆ ಸಚಿವರು ದಿಢೀರ್​ ಕಾರ್ಯಕ್ರಮವನ್ನು ರದ್ದು ಮಾಡಿದರು. ಇದರಿಂದ ಕಾಂಗ್ರೆಸ್​ ಶಾಸಕರು ಈಶ್ವರಪ್ಪ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Eshwarappa cancelled of program
ದಿಢೀರ್ ಕಾರ್ಯಕ್ರಮ ರದ್ದು ಪಡಿಸಿದ ಈಶ್ವರಪ್ಪ

By

Published : Oct 3, 2021, 7:40 PM IST

ಚಾಮರಾಜನಗರ:ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ಅವರಿಗಾಗಿ ಶಾಸಕರು ಎರಡೂವರೆ ತಾಸು ಕಾದು ಸುಸ್ತಾಗಿ ಪ್ರವಾಸ ರದ್ದಾಗಿದೆ ಎಂದು ತಿಳಿದ ಬಳಿಕ ಸಚಿವರ ವಿರುದ್ಧ ಕಾಂಗ್ರೆಸ್​ ಶಾಸಕರು ಆಕ್ರೋಶ ಹೊರಹಾಕಿದ್ದಾರೆ.

ಸಚಿವ ಈಶ್ವರಪ್ಪವರ ವಿರುದ್ಧ ಆಕ್ರೋಶ ಹೊರ ಹಾಕಿದ ಶಾಸಕ ನರೇಂದ್ರ

ಇಂದು ಮಧ್ಯಾಹ್ನ 1.45ಕ್ಕೆ ಜಿ.ಪಂ. ಸಭಾಂಗಣ ಪಕ್ಕದಲ್ಲಿನ ಕ್ಷೇಮ ಕೇಂದ್ರ ಉದ್ಘಾಟನೆಗಾಗಿ ಸಚಿವ ಈಶ್ವರಪ್ಪ ಅವರನ್ನು ಆಹ್ವಾನ ಮಾಡಲಾಗಿತ್ತು. ಇದರ ಜೊತೆ ಅಧಿಕಾರಿಗಳೊಟ್ಟಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಬೇಕಿತ್ತು. ಆದರೆ ಮಧ್ಯಾಹ್ನ 1 ಗಂಟೆಗೆ ಬರಬೇಕಿದ್ದ ಸಚಿವರು ಸಂಜೆ ನಾಲ್ಕಾದರೂ ಬರದೇ ಕೋರ್ ಕಮಿಟಿ ಸಭೆಯ ನೆಪವೊಡ್ಡಿ ಜಿಲ್ಲಾ ಪ್ರವಾಸವನ್ನು ಮೊಟಕುಗೊಳಿಸಿರುವುದಕ್ಕೆ ಕಾಂಗ್ರೆಸ್​ ಶಾಸಕರು ಕಿಡಿಕಾರಿದ್ದಾರೆ.

ಭಾನುವಾರವಾದರೂ ಸಚಿವರು ಪ್ರವಾಸ ಹಮ್ಮಿಕೊಂಡಿದ್ದರಿಂದ ಅಧಿಕಾರಿಗಳು, ಜನಪ್ರತಿನಿಧಿಗಳು ಮಧ್ಯಾಹ್ನದಿಂದ ಸಚಿವರಿಗಾಗಿ ಕಾಯುತ್ತಿದ್ದರು. ಆದರೆ ಸಚಿವರ ದಿಢೀರ್ ಪ್ರವಾಸ ರದ್ದಾಗಿದ್ದಕ್ಕೆ ಜನಪ್ರತಿನಿಧಿಗಳು ಹರಿಹಾಯ್ದಿದ್ದಾರೆ.

ಇದನ್ನೂ ಓದಿ: COVID Report: ‌‌ರಾಜ್ಯದಲ್ಲಿಂದು 664 ಮಂದಿಗೆ ಕೊರೊನಾ ಸೋಂಕು ದೃಢ, 8 ಸಾವು

ABOUT THE AUTHOR

...view details