ಚಾಮರಾಜನಗರ:ಕಾಂಗ್ರೆಸ್ನವರು ನಡೆಸುತ್ತಿರುವುದು ಹೋರಾಟವಲ್ಲ, ಅದೊಂದು ರಾಜಕೀಯ ದೊಂಬರಾಟ. ರಾಹುಲ್ ಗಾಂಧಿಯನ್ನು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿರುವುದು ಆ ಸಂಸ್ಥೆಯ ಸ್ವಾತಂತ್ರ್ಯ. ಕಾಂಗ್ರೆಸ್ ಹೋರಾಟದಲ್ಲಿ ಯಾವುದೇ ರೀತಿಯ ಹುರುಳಿಲ್ಲ. ಅವರಿಗೆ ಸಂವಿಧಾನದ ಮೇಲೆ ನಂಬಿಕೆಯಿಲ್ಲ ಎಂದು ಗಣಿ ಸಚಿವ ಹಾಲಪ್ಪ ಆಚಾರ್ ಟೀಕಿಸಿದರು.
ಕಾಂಗ್ರೆಸ್ನವರದು ಹೋರಾಟವಲ್ಲ, ರಾಜಕೀಯ ದೊಂಬರಾಟ: ಸಚಿವ ಹಾಲಪ್ಪ ಆಚಾರ್ - ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ನಿಂದ ಹೋರಾಟ
ಕಾಂಗ್ರೆಸ್ ಮಾಡುತ್ತಿರುವುದನ್ನು ಹೋರಾಟ ಎನ್ನಲು ಹೇಗೆ ಸಾಧ್ಯ? ಅವರು ರಾಜಕೀಯ ಲಾಭಕ್ಕೆ ನಾಟಕ ಆಡುತ್ತಿದ್ದಾರೆ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ.
ಕಾಂಗ್ರೆಸ್ ಮಾಡುತ್ತಿರುವುದನ್ನು ಹೋರಾಟ ಎನ್ನಲು ಹೇಗೆ ಸಾಧ್ಯ?, ಅವರು ರಾಜಕೀಯ ಲಾಭಕ್ಕೆ ಈ ನಾಟಕ ಆಡುತ್ತಿದ್ದಾರೆ. ಅಸಹಾಯಕರಾಗಿ ಜನರ ಗಮನ ಬೇರೆಡೆ ಸೆಳೆಯುವ ನಾಟಕ ಎಂದರು. ಇದೇ ವೇಳೆ ಮಡಹಳ್ಳಿ ಗುಡ್ಡ ಕುಸಿತಕ್ಕೆ ಸಂಬಂಧಿಸಿದಂತೆ ಮಾತನಾಡಿ, ನಮ್ಮ ಇಲಾಖೆಯಿಂದ ಸೂಕ್ತ ತನಿಖೆ ಮಾಡಿ ಕ್ರಮ ತೆಗೆದುಕೊಳ್ಳಲಾಗಿದೆ. ಪ್ರಮುಖ ಆರೋಪಿಯನ್ನು ಬಂಧಿಸಬೇಕಾದ್ದು ಪೊಲೀಸ್ ಇಲಾಖೆಯ ಜವಾಬ್ದಾರಿ, ಅದನ್ನೇಕೆ ಮಾಡಿಲ್ಲ ಅನ್ನೋದು ನನಗೆ ಗೊತ್ತಿಲ್ಲ. ನಮ್ಮ ಕೆಲಸ ನಾವು ಮಾಡಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ:ರಾಜಭವನ ಮುತ್ತಿಗೆ ಯತ್ನ: ಸಿದ್ದರಾಮಯ್ಯ, ಡಿಕೆಶಿ ಸೇರಿ ಕೈ ನಾಯಕರನ್ನು ವಶಕ್ಕೆ ಪಡೆದ ಪೊಲೀಸರು