ಕೊಳ್ಳೇಗಾಲ (ಚಾಮರಾಜನಗರ): ನಗರದ ಗುಂಡಾಲ್ ಜಲಾಶಯ ರಸ್ತೆಯಲ್ಲಿ ಸಂಸದರು, ಶಾಸಕರು, ಜಿ.ಪಂ ಸದಸ್ಯ ಹಾಗೂ ತಾ.ಪಂ ಸದಸ್ಯರ ವಿರುದ್ಧ ಅವಹೇಳನಕಾರಿ ಫ್ಲೆಕ್ಸ್ ಅಳವಡಿಸಿದ್ದಾರೆ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟಿಸಿದ್ದಾರೆ.
ಅವಹೇಳನಕಾರಿ ಫ್ಲೆಕ್ಸ್ ಹಾಕಿದವರ ಬಂಧಿಸುವಂತೆ ಕಾಂಗ್ರೆಸ್-ಬಿಜೆಪಿ ಜಂಟಿ ಪ್ರತಿಭಟನೆ
ಸಂಸದರು, ಶಾಸಕರು, ಜಿ.ಪಂ ಸದಸ್ಯ ಹಾಗೂ ತಾ.ಪಂ ಸದಸ್ಯರನ್ನು ಹೂಳಲು ಗುಂಡಿಗಳನ್ನು ತೋಡಲಾಗಿದೆ ಎಂದು ಇಲ್ಲಿನ ಗುಂಡಾಲ್ ಜಲಾಶಯದ ರಸ್ತೆ ಬಳಿ ಕಿಡಿಗೇಡಿಗಳು ಅವಹೇಳನಕಾರಿ ಫ್ಲೆಕ್ಸ್ ಹಾಕಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ಮುಂಖಡರು ಈ ಕೃತ್ಯವೆಸಗಿದವರ ಬಂಧಿಸುವಂತೆ ಪ್ರತಿಭಟಿಸಿದ್ದಾರೆ.
ಅವಹೇಳನಕಾರಿ ಫ್ಲೆಕ್ಸ್ ಹಾಕಿದವರ ಬಂಧಿಸುವಂತೆ ಕಾಂಗ್ರೆಸ್-ಬಿಜೆಪಿ ಜಂಟಿ ಪ್ರತಿಭಟನೆ
ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆಯ ಮುಂಭಾಗ ಸೇರಿದ ಪ್ರತಿಭಟನಾಕಾರರು ಕಿಡಿಗೇಡಿಗಳ ಬಂಧಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಘಟನೆ ಕುರಿತು ಚಾಮರಾಜನಗರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ದೊರೈರಾಜ್ ಮಾತನಾಡಿ, ನಮ್ಮ ಜನಪ್ರತಿನಿಧಿಗಳ ವಿರುದ್ಧ ಈ ರೀತಿ ಅವಹೇಳನಕಾರಿ ಫ್ಲೆಕ್ಸ್ ಹಾಕಿರುವುದು ಖಂಡನೀಯ. ಜೆಡಿಎಸ್ ಮುಖಂಡ ಮಂಜೇಶ್ ಈ ಕೃತ್ಯ ಎಸಗಿರುವ ಶಂಕೆ ಇದ್ದು ಕೂಡಲೇ ಪೊಲೀಸರು ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.