ಕರ್ನಾಟಕ

karnataka

ETV Bharat / state

ಕ್ಷುಲ್ಲಕ ಕಾರಣಕ್ಕೆ ಗರ್ಭಿಣಿ ಹೊಟ್ಟೆಗೆ ಒದ್ದು ಭ್ರೂಣ ಹತ್ಯೆ! - Conflict between friends in Chamarajanagar

ಸ್ನೇಹಿತರೊಡನೆ ಸೋಮು ವ್ಯಾಯಾಮ ಮಾಡುವಾಗ ಮನೆಯ ಮಹಡಿಯ ಮೇಲೆ ನಿಂತು ನನ್ನ ಹೆಂಡತಿಯನ್ನು ನೋಡುತ್ತಿದ್ದೀಯಾ ಎಂದು ಅವಾಚ್ಯ ಶಬ್ದದಿಂದ ಬೈದು, ಸೋಮುನನ್ನು ಬೆಳೆಮಹೇಶ, ಶಿವಣ್ಣ, ಗೋವಿಂದ ಹಲ್ಲೆ ಮಾಡುತ್ತಿದ್ದರು. ಗಲಾಟೆ ಬಿಡಿಸಲು ಬಂದ ಸೋಮುವಿನ ತಾಯಿ ಮಲ್ಲಮ್ಮಳಿಗೆ ರಾಡಿನಿಂದ ಹೊಡೆದು ಗಾಯಗೊಳಿಸಿದಲ್ಲದೆ, ಆತನ ಹೆಂಡತಿ ಮಾದೇವಿಯ ಹೊಟ್ಟೆಗೆ ಕಾಲಿನಿಂದ ಒದ್ದಿದ್ದಾನೆ ಎನ್ನಲಾಗಿದೆ.

ಮಾದೇವಿಗೆ ಗರ್ಭಪಾತವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ
ಮಾದೇವಿಗೆ ಗರ್ಭಪಾತವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ

By

Published : Feb 26, 2021, 10:04 PM IST

ಚಾಮರಾಜನಗರ:ವ್ಯಕ್ತಿಯೋರ್ವ ಗರ್ಭಿಣಿ ಹೊಟ್ಟೆಗೆ ಒದ್ದು ಭ್ರೂಣ ಹತ್ಯೆ ಮಾಡಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಉತ್ತಂಬಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಸೋಮು ಎಂಬಾತನ ಹೆಂಡತಿ ಮಾದೇವಿಗೆ ಗರ್ಭಪಾತವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಈಕೆಯ ಗಂಡ ಹಾಗೂ ಅತ್ತೆ ಮಲ್ಲಮ್ಮ ಗಲಾಟೆಯಲ್ಲಿ ಗಾಯಗೊಂಡಿದ್ದಾರೆ. ಅದೇ ಗ್ರಾಮದ ಕಾಮಶೆಟ್ಟಿ ಮಗ ಬೆಳೆಮಹೇಶ ಹಾಗೂ ಶಿವಣ್ಣ, ಗೋವಿಂದ ಹಲ್ಲೆ ಮಾಡಿರುವ ಆರೋಪಿಗಳು ಎನ್ನಲಾಗಿದೆ.

ಓದಿ:ಚಾಮರಾಜನಗರದಲ್ಲಿ ರೆಸ್ಟೋರೆಂಟ್ ಧಗಧಗ.. ಅಗ್ನಿ ಅನಾಹುತದಿಂದ ಗ್ರಾಹಕರು ಪಾರು

ತನ್ನ ಸ್ನೇಹಿತರೊಡನೆ ಸೋಮು ವ್ಯಾಯಾಮ ಮಾಡುವಾಗ ಮನೆಯ ಮಹಡಿಯ ಮೇಲೆ ನಿಂತು ನನ್ನ ಹೆಂಡತಿಯನ್ನು ನೋಡುತ್ತಿದ್ದೀಯಾ ಎಂದು ಅವಾಚ್ಯ ಶಬ್ದದಿಂದ ಬೈದು, ಸೋಮುನನ್ನು ಬೆಳೆಮಹೇಶ, ಶಿವಣ್ಣ, ಗೋವಿಂದ ಹಲ್ಲೆ ಮಾಡುತ್ತಿದ್ದರು. ಗಲಾಟೆ ಬಿಡಿಸಲು ಬಂದ ಸೋಮುವಿನ ತಾಯಿ ಮಲ್ಲಮ್ಮಳಿಗೆ ರಾಡಿನಿಂದ ಹೊಡೆದು ಗಾಯಗೊಳಿಸಿದಲ್ಲದೆ, ಆತನ ಹೆಂಡತಿ ಮಾದೇವಿಯ ಹೊಟ್ಟೆಗೆ ಕಾಲಿನಿಂದ ಒದ್ದಿದ್ದಾನೆ ಎನ್ನಲಾಗಿದೆ.

ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಮಾದೇವಿಯ ಹೊಟ್ಟೆಗೆ ಒದ್ದಿದ್ದರಿಂದ ತೀವ್ರ ರಕ್ತಸ್ರಾವವಾಗಿ ಗರ್ಭಪಾತವಾಗಿದೆ. ರಕ್ತಸ್ರಾವ ನಿಲ್ಲದ‌ ಕಾರಣ ಮಾದೇವಿಯನ್ನು ಹೆಚ್ಚಿನ ಚಿಕಿತ್ಸೆಗೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details