ಚಾಮರಾಜನಗರ:ಅಪ್ರಾಪ್ತೆಯನ್ನು ಪರಿಚಯಿಸಿಕೊಂಡು ಬಲವಂತದಿಂದ ವಿವಾಹವಾಗಿದ್ದ ಬಸ್ ಕಂಡಕ್ಟರ್ ಹಾಗೂ ಮದುವೆ ಮಾಡಿಸಿದ್ದ ಇಬ್ಬರು ಅರ್ಚಕರಿಗೆ ಕಠಿಣ ಶಿಕ್ಷೆ ವಿಧಿಸಲಾಗಿದೆ. ಮಕ್ಕಳ ಸ್ನೇಹಿ ಹಾಗೂ 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ವಿಧಿಸಿ, ಆದೇಶ ಹೊರಡಿಸಿದೆ.
ಕೆಎಸ್ಆರ್ಟಿಸಿ ಕಂಡಕ್ಟರ್ ರವಿಕುಮಾರ್, ಅರ್ಚಕರಾದ ಕೆ ಎನ್ ಶಾಸ್ತ್ರಿ ಮತ್ತು ರಾಜೇಶ್ವರ್ ಶಾಸ್ತ್ರಿ ಶಿಕ್ಷೆಗೊಳಗಾದ ಅಪರಾಧಿಗಳು. ಕಾಲೇಜಿಗೆ ತೆರಳುತ್ತಿದ್ದ ಬಾಲಕಿಯನ್ನು ಪರಿಚಯಿಸಿಕೊಂಡಿದ್ದ ಕಂಡಕ್ಟರ್, 2017 ರ ನವೆಂಬರ್ 23 ರಂದು ಕಾರಿನಲ್ಲಿ ಬಲವಂತವಾಗಿ ಹತ್ತಿಸಿಕೊಂಡು ಶ್ರೀರಂಗಪಟ್ಟಣದಲ್ಲಿ ವಿವಾಹ ಮಾಡಿಕೊಂಡಿದ್ದರು. ಈತನಿಗೆ ಇಬ್ಬರು ಅರ್ಚಕರು ಸಹಕಾರ ಕೊಟ್ಟು ವಿವಾಹ ಮಾಡಿಸಿದ್ದರು ಎನ್ನಲಾಗ್ತಿದೆ.