ಚಾಮರಾಜನಗರ:ನಿರ್ಬಂಧಿತ ಪ್ರದೇಶಕ್ಕೆ ಬೈಕ್ ಮೂಲಕ ಮೂವರು ಪೋರ್ಚುಗಲ್ ದೇಶದ ಪ್ರಜೆಗಳು ಪ್ರವೇಶಿಸಿ ಗಲಭೆ ಮಾಡಿರುವ ಘಟನೆ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದ ಸಫಾರಿ ವಲಯದಲ್ಲಿ ನಡೆದಿದೆ.
ಬಂಡಿಪುರ ಅರಣ್ಯ ಪ್ರದೇಶದಲ್ಲಿ ಪೋರ್ಚುಗಲ್ ಪ್ರಜೆಗಳ ದಾಂಧಲೆ...ದೂರು - Complaint against Portuguese citizens
ಚಾಮರಾಜನಗರದ ಬಂಡಿಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಮೂವರು ಪೋರ್ಚುಗಲ್ ಪ್ರಜೆಗಳು ಅಕ್ರಮವಾಗಿ ಪ್ರವೇಶಿಸಿರುವುದಲ್ಲದೆ ಅರಣ್ಯ ಇಲಾಖೆ ಸಿಬ್ಬಂದಿಗಳೊಂದಿಗೆ ಅನುಚಿತ ವರ್ತನೆ ತೋರಿಸಿದ್ದಾರೆ. ಈ ಬಗ್ಗೆ ಮೊಕದ್ದಮೆ ದಾಖಲಾಗಿದೆ.
![ಬಂಡಿಪುರ ಅರಣ್ಯ ಪ್ರದೇಶದಲ್ಲಿ ಪೋರ್ಚುಗಲ್ ಪ್ರಜೆಗಳ ದಾಂಧಲೆ...ದೂರು Portuguese citizens](https://etvbharatimages.akamaized.net/etvbharat/prod-images/768-512-7528206-175-7528206-1591613472324.jpg)
ನುನೋ ರಿಕಾರ್ಡೊ, ಮಿಗ್ವೆಲ್ ಗ್ಯಾರಿಡೋ, ಥಾಮಸ್ ಪಿನ್ಹೋ ಎಂಬ ಪೋರ್ಚುಗೀಸರು ಸಫಾರಿ ವಲಯಕ್ಕೆ ಬೈಕ್ ಮೂಲಕ ಅಕ್ರಮವಾಗಿ ಪ್ರವೇಶಿಸಿದಲ್ಲದೆ ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಅನುಚಿತ ವರ್ತನೆ ತೋರಿದ್ದಾರೆ ಎನ್ನಲಾಗುತ್ತಿದೆ. ಈ ಮೂವರೂ ಕೂಡಾ ಡಿಆರ್ಡಿಒಗೆ ಬಂದಿರುವ ವಿಶೇಷ ಎಂಜಿನಿಯರ್ಗಳು ಎಂದು ತಿಳಿದುಬಂದಿದೆ. ಈ ಮೂವರ ಮೇಲೆ ವಿದೇಶಿ ಪ್ರಜೆಗಳ ಕಾಯ್ದೆ ಅಡಿ ಮೊಕದ್ದಮೆ ದಾಖಲಿಸಿ ಗುಂಡ್ಲುಪೇಟೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಲು ಅರಣ್ಯ ಇಲಾಖೆ ಮುಂದಾಗಿದೆ. ಇದರಿಂದ ಅರಣ್ಯ ಇಲಾಖೆ ವಿರುದ್ಧ ಈ ಮೂವರೂ ಕೂಡಾ ರಾಯಭಾರ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸದ್ಯ, ಮೂವರನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದುಕೊಂಡಿದ್ದು ಅವರ ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ.