ಕರ್ನಾಟಕ

karnataka

ETV Bharat / state

ಕೊಳ್ಳೇಗಾಲದಲ್ಲಿ ಅಪ್ಪು ಪುಣ್ಯಸ್ಮರಣೆ.. 'ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ' ಹಾಡು ಹಾಡಿ ಭಾವುಕರಾದ ಶಾಸಕ - ನಿರ್ದೇಶಕ ಚೇತನ್

ಪುನೀತ್ ರಾಜ್​ಕುಮಾರ್ ನಿಧನವಾಗಿ ಹನ್ನೊಂದನೇ ದಿನದ ಪುಣ್ಯಾರಾಧನೆ ಹಿನ್ನೆಲೆ ಕೊಳ್ಳೇಗಾಲದ ಖಾಸಗಿ ಕಲ್ಯಾಣ ಮಂಟಪದಲ್ಲಿ ಅಪ್ಪು-ನೆನಪು ನುಡಿ-ಗಾನ-ಚಿತ್ರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಶಾಸಕ ಎನ್​ ಮಹೇಶ್​ ಭಾವುಕರಾದರು.

commemoration program of puneeth rajkumar
ಅಪ್ಪು ಪುಣ್ಯಸ್ಮರಣೆ

By

Published : Nov 9, 2021, 10:24 AM IST

Updated : Nov 9, 2021, 10:36 AM IST

ಕೊಳ್ಳೇಗಾಲ: ನಟ ಪುನೀತ್ ರಾಜ್​ಕುಮಾರ್ ನಿಧನವಾಗಿ 11ನೇ ದಿನದ ಪುಣ್ಯಾರಾಧನೆ ಹಿನ್ನೆಲೆ ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಅಪ್ಪು-ನೆನಪು ನುಡಿ-ಗಾನ-ಚಿತ್ರ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಅಪ್ಪು ಪುಣ್ಯಸ್ಮರಣೆ

ಶಾಸಕ ಎನ್. ಮಹೇಶ್ ಅಭಿಮಾನಿ ಬಳಗ, ಡಾ. ರಾಜ್ ಕುಮಾರ್ ಅಭಿಮಾನಿ ಸಂಘ, ಡಾ. ಶಿವರಾಜ್ ಕುಮಾರ್ ಅಭಿಮಾನಿ ಸಂಘ, ಅಪ್ಪು ಟೀಂ ಹಾಗೂ ರಂಗಜೋಳಿಗೆ ವತಿಯಿಂದ ಆಯೋಜಿಸಿದ್ದ ಅಪ್ಪು-ನೆನಪು ನುಡಿ-ಗಾನ-ಚಿತ್ರ ಕಾರ್ಯಕ್ರಮಕ್ಕೆ ಶಾಸಕ ಎನ್. ಮಹೇಶ್ ಚಾಲನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎನ್. ಮಹೇಶ್ ಅಪ್ಪುವಿನ ಗುಣಗಾನ ಮಾಡಿ ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ ಎಂಬ ಹಾಡು ಹೇಳುವುದರ ಮೂಲಕ ಭಾವುಕರಾಗಿ ಕಣ್ಣೀರಿಟ್ಟರು.

ಇದಕ್ಕೂ ಮುನ್ನ ಪುನೀತ್ ಭಾವಚಿತ್ರಕ್ಕೆ ಮೇಣದ ಬತ್ತಿ ಹಚ್ಚಿ ಗೊಂಬೆ ಹೇಳುತೈತೆ ಹಾಡನ್ನು ಅಭಿಮಾನಿಗಳೆಲ್ಲ ಹಾಡಿ ಅಪ್ಪುವಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಇದನ್ನೂ ಓದಿ:11ನೇ ಪುನೀತ್​ ಪುಣ್ಯಸ್ಮರಣೆ: ಗಜೇಂದ್ರಗಡದ 40 ಅಪ್ಪು ಅಭಿಮಾನಿಗಳಿಂದ ನೇತ್ರದಾನ

ಕಾರ್ಯಕ್ರಮದಲ್ಲಿ ಆಕಾಶ್ ಚಿತ್ರ ನಿರ್ದೇಶಕ ಮಹೇಶ್ ಬಾಬು, ಜೇಮ್ಸ್ ಚಿತ್ರ ನಿರ್ದೇಶಕ ಚೇತನ್ ಪುನೀತ್ ರಾಜ್ ಕುಮಾರ್ ಜೊತೆಗಿನ ಒಡನಾಟ ಹಂಚಿಕೊಂಡು ಅವರ ವ್ಯಕ್ತಿತ್ವವನ್ನು ಕೊಂಡಾಡಿದರು.

Last Updated : Nov 9, 2021, 10:36 AM IST

ABOUT THE AUTHOR

...view details