ಕರ್ನಾಟಕ

karnataka

ETV Bharat / state

ಮಾದಪ್ಪನ ಹುಂಡಿಯಲ್ಲಿ ₹28 ಲಕ್ಷ ಮೌಲ್ಯದ ಅಮಾನ್ಯ ನೋಟುಗಳು ಪತ್ತೆ - ​ ETV Bharat Karnataka

ನಾಡಿದ ಪ್ರಸಿದ್ಧ ದೇಗುಲ ಮಲೆಮಹದೇಶ್ವರ ಬೆಟ್ಟದ ಹುಂಡಿ ಎಣಿಕೆ ವೇಳೆ ಅಮಾನ್ಯಗೊಂಡ ಲಕ್ಷಾಂತರ ರೂಪಾಯಿ ಮೌಲ್ಯದ ನೋಟುಗಳು ಪತ್ತೆಯಾಗಿವೆ.

ಮಲೆ ಮಹದೇಶ್ವರ ಬೆಟ್ಟದ ಹುಂಡಿ ಎಣಿಕೆ
ಮಲೆ ಮಹದೇಶ್ವರ ಬೆಟ್ಟದ ಹುಂಡಿ ಎಣಿಕೆ

By ETV Bharat Karnataka Team

Published : Oct 15, 2023, 3:59 PM IST

ಚಾಮರಾಜನಗರ :ನೋಟು ಅಮಾನ್ಯೀಕರಣದ 7 ವರ್ಷಗಳ ಬಳಿಕ ಲಕ್ಷಾಂತರ ರೂಪಾಯಿ ಮೌಲ್ಯದ 500, 1,000 ರೂಪಾಯಿ ಮುಖಬೆಲೆಯ ನೋಟುಗಳು ರಾಜ್ಯದ ಪ್ರಸಿದ್ಧ ಯಾತ್ರಾಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಹುಂಡಿಯಲ್ಲಿ ಸಿಕ್ಕಿದೆ.

ಸಂಗ್ರಹವಾಗಿದ್ದ ನೋಟುಗಳನ್ನು ಭಾನುವಾರ ಎಣಿಕೆ ಮಾಡಲಾಗಿದೆ. 1,000 ರೂ. ಮುಖಬೆಲೆಯ ನೋಟುಗಳು 677 ಸಿಕ್ಕಿವೆ (ಇದರ ಮೌಲ್ಯ 6,77,000 ರೂ.). 500 ರೂ. ಮುಖಬೆಲೆಯ ನೋಟುಗಳು 4,353 ( 21,76,500 ರೂ.) ಇದ್ದು, ಒಟ್ಟು 28,53,500 ಲಕ್ಷ ಹಣವನ್ನು ಭಕ್ತರು ಹುಂಡಿಯಲ್ಲಿ ಹಾಕಿದ್ದಾರೆ. 2,000 ರೂ. ಮುಖಬೆಲೆಯ ನೋಟುಗಳು 3.56 ಲಕ್ಷದಷ್ಟು ಸಂಗ್ರಹವಾಗಿದ್ದು, ಈ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದಾಗಿದೆ. ಆದರೆ, 28 ಲಕ್ಷ ಹಣ ಹುಂಡಿ ಸೇರಿದರೂ ಪ್ರಾಧಿಕಾರಕ್ಕೆ ಪ್ರಯೋಜನಕ್ಕೆ ಬಾರದಂತಾಗಿದೆ.

ಸೆಪ್ಟೆಂಬರ್ ತಿಂಗಳು ನಡೆದ ಹುಂಡಿ ಎಣಿಕೆಯಲ್ಲಿ 2.38 ಕೋಟಿ ರೂ. ಸಂಗ್ರಹವಾಗಿತ್ತು. ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಸುಮಾರು 12 ಗಂಟೆಗಳ ಕಾಲ ಎಣಿಕೆ ಕಾರ್ಯ ನಡೆದಿತ್ತು. 36 ದಿನಗಳ ಅವಧಿಗೆ 2,38,43,177 ರೂ. ಸಂಗ್ರಹವಾಗಿತ್ತು. ಭಕ್ತರು 63 ಗ್ರಾಂ ಚಿನ್ನ ಹಾಗೂ 3.173 ಕೆ.ಜಿ ಬೆಳ್ಳಿಯನ್ನು ದೇವರಿಗೆ ಕಾಣಿಕೆ ರೂಪದಲ್ಲಿ ಅರ್ಪಿಸಿದ್ದರು.

ಇದನ್ನೂ ಓದಿ:ಮಹಾಲಯ ಅಮಾವಾಸ್ಯೆ ಹಿನ್ನೆಲೆ ಮಾದಪ್ಪನ ಬೆಟ್ಟದಲ್ಲಿ ಭಕ್ತಸಾಗರ : ಸರತಿ ಸಾಲಿನಲ್ಲಿ ನಿಂತು ಸಮಸ್ಯೆ ಆಲಿಸಿದ ಕಾರ್ಯದರ್ಶಿ

ABOUT THE AUTHOR

...view details