ಕರ್ನಾಟಕ

karnataka

ETV Bharat / state

ನಿರಾಶ್ರಿತರಿಗೆ ನೆಲೆಯಾದ ಮಾದಪ್ಪನ ಸನ್ನಿಧಿ - MaleMahadeshwara hills News

ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರಾಶ್ರಿತರ ಕೇಂದ್ರ ತೆರೆಯಲಾಗಿದ್ದು, ಅಲ್ಲಿ ಪ್ರಸ್ತುತ 25 ಮಂದಿಗೆ ಆಶ್ರಯ ನೀಡಲಾಗಿದೆ.

MaleMahadeshwara hills
ನಿರಾಶ್ರಿತರಿಗೆ ನೆಲೆಯಾದ ಮಾದಪ್ಪನ ಸನ್ನಿಧಿ...

By

Published : Apr 3, 2020, 5:25 PM IST

Updated : Apr 3, 2020, 7:35 PM IST

ಚಾಮರಾಜನಗರ: ದೇಶ ಲಾಕ್​​ಡೌನ್​ ಗಿರುವುದರಿಂದ ಸೂರು-ಊಟವಿಲ್ಲದೇ ಪರದಾಡುತ್ತಿದ್ದ ನಿರಾಶ್ರಿತರಿಗೆ ಮಾದಪ್ಪನ ಸನ್ನಿಧಿಯೇ ನೆಲೆಯಾಗಿದೆ.

ನಿರಾಶ್ರಿತರಿಗೆ ನೆಲೆಯಾದ ಮಾದಪ್ಪನ ಸನ್ನಿಧಿ...

ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರಾಶ್ರಿತರ ಕೇಂದ್ರ ತೆರೆಯಲಾಗಿದ್ದು, 25 ಮಂದಿ ಈಗಾಗಲೇ ಆಶ್ರಯ ಪಡೆದುಕೊಂಡಿದ್ದಾರೆ. ಅವರಿಗೆ ಹೊಸ ಬಟ್ಟೆ, ಕಲ್ಯಾಣ ಮಂಟಪದಲ್ಲಿ ವಸತಿ ಸೌಕರ್ಯ ಕಲ್ಪಿಸಲಾಗಿದೆ.

ನಿರಾಶ್ರಿತ ಮಹಿಳೆಯರಿಗೆ ಉಚಿತ ಸೀರೆ, ಪುರುಷರಿಗೆ ಪಂಚೆ, ಬಟ್ಟೆಗಳನ್ನ ನೀಡುತ್ತಿದ್ದು, ಅಗತ್ಯ ವೈದ್ಯಕೀಯ ಸೌಲಭ್ಯವನ್ನು ಪ್ರಾಧಿಕಾರ ಮಾಡಿರುವುದಾಗಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವ ಸ್ವಾಮಿ ತಿಳಿಸಿದ್ದಾರೆ.

Last Updated : Apr 3, 2020, 7:35 PM IST

ABOUT THE AUTHOR

...view details