ಕರ್ನಾಟಕ

karnataka

ETV Bharat / state

ಒಳ್ಳೆಯದನ್ನ ಜನರಿಗೆ ಹೇಳಬೇಕು, ಕೆಟ್ಟದನ್ನ ನಮ್ಮೊಳಗೆ ಚರ್ಚಿಸಬೇಕು.. ಸಚಿವ ಸುರೇಶ್ ಕುಮಾರ್

ಬೆಂಗಳೂರಿನ 6 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ 15 ದಿನಗಳವರೆಗೆ ಮಾತ್ರ ಶಾಲೆ ಇರಲ್ಲ. ಈ ಸಂಬಂಧ ಸಿಎಂ ಜೊತೆ ಮಾತುಕತೆ ಮಾಡಲಾಗಿದೆ. 10ನೇ ತರಗತಿ ಶಾಲೆಗೆ ಹಾಜರಾತಿ ಕಡ್ಡಾಯ ಅಲ್ಲ, ಪೋಷಕರ ಅನುಮತಿ ಪಡೆದು, ಒಪ್ಪಿಗೆ ಪತ್ರವನ್ನ ವಿದ್ಯಾರ್ಥಿಗಳು ತರಬೇಕು..

ಸುರೇಶ್ ಕುಮಾರ್
ಸುರೇಶ್ ಕುಮಾರ್

By

Published : Apr 2, 2021, 3:35 PM IST

ಚಾಮರಾಜನಗರ :ಒಳ್ಳೆಯದನ್ನು ಜನರಿಗೆ ಹೇಳಬೇಕು, ಕೆಟ್ಟದನ್ನು ನಮ್ಮ ವೇದಿಕೆಯಲ್ಲಿ ಚರ್ಚಿಸಬೇಕೆಂರು ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಸಿಎಂ ಹಸ್ತಕ್ಷೇಪ ಮಾಡುತ್ತಿದ್ದಾರೆಂದು ಸಚಿವ ಈಶ್ವರಪ್ಪ ಬರೆದ ಪತ್ರಕ್ಕೆ ಶಿಕ್ಷಣ ಸಚಿವ ಅಸಮಾಧಾನ ಹೊರ ಹಾಕಿದರು.

ಬಿಳಿಗಿರಿರಂಗನ ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಸರ್ಕಾರದ ವಿಚಾರದ ಬಗ್ಗೆ ಪತ್ರ ಬರೆಯುವ ಅವಶ್ಯಕತೆ ಇರಲಿಲ್ಲ. ಪತ್ರ ಬಹಿರಂಗ ಆಗುವ ಅವಶ್ಯಕತೆ ಇರಲಿಲ್ಲ. ಒಳ್ಳೆಯದನ್ನು ನಾವು ಹೊರಗಡೆ ಹೇಳಬೇಕು, ಕೆಟ್ಟದನ್ನ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡ ಬೇಕಾಗಿತ್ತು ಎಂದು ಅಭಿಪ್ರಾಯಪಟ್ಟರು.

ಸಿಎಂ ವಿರುದ್ಧ ಸಚಿವ ಈಶ್ವರಪ್ಪ ಪತ್ರ ಸಮರದ ಬಗ್ಗೆ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯೆ..

ಬೆಂಗಳೂರಿನ 6 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ 15 ದಿನಗಳವರೆಗೆ ಮಾತ್ರ ಶಾಲೆ ಇರಲ್ಲ. ಈ ಸಂಬಂಧ ಸಿಎಂ ಜೊತೆ ಮಾತುಕತೆ ಮಾಡಲಾಗಿದೆ. 10ನೇ ತರಗತಿ ಶಾಲೆಗೆ ಹಾಜರಾತಿ ಕಡ್ಡಾಯ ಅಲ್ಲ, ಪೋಷಕರ ಅನುಮತಿ ಪಡೆದು, ಒಪ್ಪಿಗೆ ಪತ್ರವನ್ನ ವಿದ್ಯಾರ್ಥಿಗಳು ತರಬೇಕು ಎಂದು ತಿಳಿಸಿದರು.

ಇದನ್ನೂ ಓದಿ..ಸರ್ಕಾರದಿಂದ ಕೋವಿಡ್ ಮಾರ್ಗಸೂಚಿ ಬಿಡುಗಡೆಗೊಳ್ಳಲಿದೆ: ಆರೋಗ್ಯ ಸಚಿವ

ABOUT THE AUTHOR

...view details