ಕರ್ನಾಟಕ

karnataka

ETV Bharat / state

ಬಿ.ಸಿ. ಪಾಟೀಲ್​ಗೆ ಅನ್ನದಾತರಿಂದ ಕ್ಲಾಸ್​; ಪ್ರಶ್ನೆಗೆ ಉತ್ತರಿಸಲು ಕೃಷಿ ಸಚಿವರ ತಡಕಾಟ - Agriculture Minister B.C. Patil

ಕೃಷಿ ಸಚಿವ ಬಿ.ಸಿ. ಪಾಟೀಲ ರೈತರೊಂದಿಗೆ ಒಂದು ದಿನ ಕಾರ್ಯಕ್ರಮಕ್ಕಾಗಿ ಚಾಮರಾಜನಗರದ ಗುಂಡ್ಲುಪೇಟೆ ಆಗಮಿಸಿದ್ದರು. ಈ ವೇಳೆ ರೈತರು ಸಚಿವ ಬಿಸಿಪಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

dsds
ಬಿ.ಸಿ ಪಾಟೀಲ್​ಗೆ ಅನ್ನದಾತರಿಂದ ಕ್ಲಾಸ್​

By

Published : Jan 23, 2021, 3:53 PM IST

ಚಾಮರಾಜನಗರ: ಕೃಷಿ ಸಚಿವ ಬಿ.ಸಿ. ಪಾಟೀಲರಿ​ಗೆ ಮತ್ತೆ ಪ್ರತಿಭಟನೆಯ ಬಿಸಿ ತಟ್ಟಿದ್ದು, ಅನ್ನದಾತರು ತರಾಟೆಗೆ ತೆಗೆದುಕೊಂಡಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದಿದೆ.

ಬಿ.ಸಿ ಪಾಟೀಲ್​ಗೆ ಅನ್ನದಾತರಿಂದ ಕ್ಲಾಸ್​

ರೈತರೊಂದಿಗೆ ಒಂದು ದಿನ ಕಾರ್ಯಕ್ರಮಕ್ಕಾಗಿ ನಗರಕ್ಕೆ ಆಗಮಿಸಿದ್ದ ಬಿಸಿಪಿ, ಸರಣಿ ಪ್ರತಿಭಟನೆಗಳಿಂದ ಎಚ್ಚೆತ್ತಿದ್ದರು. ತಾಪಂ ಕಚೇರಿ ಮುಂಭಾಗ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ತೆರಳಿ ರೈತರ ಸಮಸ್ಯೆ ಆಲಿಸಿ ಅನ್ನದಾತರ ತೀಕ್ಷ್ಣ ಪ್ರಶ್ನೆಗಳಿಗೆ ಉತ್ತರ ಕೊಡಲು ತಿಣುಕಾಡಿದ್ದಾರೆ.

ರೈತವಿರೋಧಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದ ಪ್ರತಿಭಟನಾಕಾರರು, ರೈತರಿಗೆ ಏನು ಮಾಡಿದ್ದೀರಿ? ಭತ್ತ ಖರೀದಿ ಕೇಂದ್ರ ತೆರೆದಿಲ್ಲ, ರೈತರಿಗೆ ಉಪಯುಕ್ತ ಉಪಕರಣಗಳನ್ನು ಇಲಾಖೆ ನೀಡುತ್ತಿಲ್ಲ ಎಂದು ರೈತ ಮುಖಂಡ ಹೊನ್ನೂರು ಪ್ರಕಾಶ್ ಸಚಿವರಿಗೆ ಕ್ಲಾಸ್ ತೆಗೆದುಕೊಂಡರು.

ಇದಕ್ಕೆ ಸಚಿವ ಬಿ.ಸಿ. ಪಾಟೀಲ ಉತ್ತರಿಸಿ, ನಾನು ಸಹ ರೈತ ಕುಟುಂಬದಿಂದ ಬಂದವನು. ಸರ್ಕಾರ ನನಗೆ ಅರಣ್ಯ ಖಾತೆ ಕೊಟ್ಟಿತ್ತು. ಆದ್ರೆ ಕೃಷಿ ಖಾತೆ ಕೇಳಿ ಪಡೆದಿದ್ದೇನೆ. ರೈತರೊಂದಿಗೆ ಒಂದು ದಿನ ಕಾರ್ಯಕ್ರಮಕ್ಕೆ ಸರ್ಕಾರದ ಒಂದು ರೂಪಾಯಿ ಖರ್ಚು ಮಾಡುತ್ತಿಲ್ಲ. ಜಿಲ್ಲೆಯಲ್ಲಿ ಕೃಷಿ ಕಾಲೇಜಿಗೆ 25 ಕೋಟಿ ರೂಪಾಯಿ ಕೊಟ್ಟಿದ್ದೇನೆ ಎಂದು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು.

ABOUT THE AUTHOR

...view details