ಕರ್ನಾಟಕ

karnataka

ETV Bharat / state

ಆಟೋ‌ ನಿಲ್ಲಿಸಿದ ವಿಚಾರಕ್ಕೆ ಗ್ರಾಮಗಳ ಜನರ ನಡುವೆ ಗಲಾಟೆ: ನಾಲ್ವರ ಬಂಧನ - ಆಟೋ‌ ವಿಚಾರಕ್ಕೆಗಲಾಟೆ

ನಡುದಾರಿಯಲ್ಲಿ ಆಟೋ ನಿಲ್ಲಿಸಿದ ವಿಷಯಕ್ಕೆ ಕ್ಯಾತೆ ತೆಗೆದ ಎರಡು ಗ್ರಾಮದ ಮಂದಿ ಗಲಾಟೆ ಮಾಡಿಕೊಂಡಿದ್ದಾರೆ. ಈ ಗಲಾಟೆ ತಾರಕಕ್ಕೇರುತ್ತಲೇ ಊರ ಮಂದಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು.

arrest
ನಾಲ್ವರ ಬಂಧನ

By

Published : Jun 22, 2021, 7:22 AM IST

ಚಾಮರಾಜನಗರ:ದಾರಿ ಮಧ್ಯೆ ಆಟೋ ನಿಲ್ಲಿಸಿದ್ದ ವಿಚಾರಕ್ಕೆ ಎರಡು ಗ್ರಾಮಗಳ ಗುಂಪುಗಳ ನಡುವೆ ಮಾರಾಮಾರಿ ಆಗಿದೆ. ಈ ಘಟನೆ ಚಾಮರಾಜನಗರ ತಾಲೂಕಿನ ವೀರಯ್ಯನಪುರ ಗ್ರಾಮದಲ್ಲಿ ನಡೆದಿದೆ.

ಈ ಸಂಬಂಧ ಚಾಮರಾಜನಗರ ತಾಲೂಕಿನ ಕೋಳಿಪಾಳ್ಯ ಗ್ರಾಮದ ಮಹೇಶ್, ಲೋಕೇಶ್, ದೇವರಾಜು ಸೇರಿದಂತೆ ನಾಲ್ವರನ್ನು ಚಾಮರಾಜನಗರ ಪೂರ್ವ ಠಾಣೆ ಬಂಧಿಸಿದ್ದಾರೆ. ಕೋಳಿಪಾಳ್ಯ ಹಾಗೂ ವೀರಯ್ಯನಪುರ 600 ಮೀ ದೂರದಲ್ಲಿನ ಎರಡು ಗ್ರಾಮಗಳಾಗಿದ್ದು ಆಟೋ ನಿಲ್ಲಿಸಿದ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಕೊನೆಗೆ ಎರಡು ಗ್ರಾಮಗಳ‌ ಯುವಕರ ಗುಂಪಿನ ನಡುವೆ ಘರ್ಷಣೆಯಾಗಿ ನಾಲ್ಕೈದು ಮಂದಿಗೆ ಸಣ್ಣಪುಟ್ಟ ಗಾಯಗಳೂ ಆಗಿತ್ತು.

ಗಲಾಟೆ ನಡೆಸಿದ ನಾಲ್ವರ ಬಂಧಿಸಿದ ಪೊಲೀಸರು

ಗಲಾಟೆ ಅತಿರೇಕಕ್ಕೆ ಹೋಗುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ವೀರಯ್ಯನಪುರ ಗ್ರಾಮದ ಮಹಾದೇವನಾಯಕ ಎಂಬವರು ಕೊಲೆ ಪ್ರಯತ್ನದ ದೂರು ನೀಡಿದ್ದರಿಂದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಚಾಮರಾಜನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಇದು ನನ್ನ ಕೊನೆ ಫೇಸ್​ಬುಕ್​​​ ಪೋಸ್ಟ್​​... ಪತಿ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ 24ರ ಯುವತಿ

ABOUT THE AUTHOR

...view details