ಚಾಮರಾಜನಗರ: ಸಿಜೆಐ ರಮಣ ಹಾಗೂ ಅವರ ಪತ್ನಿ ಎರಡನೇ ದಿನದ ಚಾಮರಾಜನಗರ ಜಿಲ್ಲಾ ಪ್ರವಾಸದಲ್ಲಿ ಬಂಡೀಪುರ ಸಫಾರಿ ಹಾಗೂ ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ನೀಡಿದರು.
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಸಿಜೆಐ ಎನ್. ವಿ. ರಮಣ ಭೇಟಿ ಗುಂಡ್ಲುಪೇಟೆ ತಾಲೂಕಿನ ಪ್ರಸಿದ್ಧ ಧಾರ್ಮಿಕ ಸ್ಥಳವಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಸಿಜೆಐ ಎನ್. ವಿ. ರಮಣ ಕುಟುಂಬ ಸಮೇತರಾಗಿ ಭೇಟಿ ನೀಡಿ ಗೋಪಾಲಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಹಿಮಚ್ಛಾದಿತ ಪರ್ವತ ಕಂಡು ಪುಳಕಿತರಾದ ರಮಣ ಅವರು ಪ್ರಕೃತಿ ಸೌಂದರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ತಮಿಳುನಾಡಿನ ಮಧುಮಲೈ ಆನೆ ಶಿಬಿರ ಹಾಗೂ ಬಂಡೀಪುರದಲ್ಲಿ ಒಂದು ಗಂಟೆಗಳ ಕಾಲ ಸಫಾರಿಗೆ ತೆರಳಿ ಕಾಡು ಹಾಗೂ ವನ್ಯಜೀವಿಗಳನ್ನು ಕಣ್ತುಂಬಿಕೊಂಡರು. ಸೋಮವಾರ ರಾತ್ರಿ ಬಂಡೀಪುರದ ಸರಾಯ್ ರೆಸಾರ್ಟ್ನಲ್ಲೇ ತಂಗಿದ್ದ ಸಿಜೆಐ ಇಂದು ಸಂಜೆ ಮೈಸೂರಿಗೆ ತೆರಳಿದ್ದಾರೆ. ಸೋಮವಾರ ಹರಳುಕೋಟೆ ದೇವಾಲಯ, ದೀನಬಂಧು ಶಾಲೆಗೆ ಭೇಟಿ ನೀಡಿದ್ದರು.
ಓದಿ:ಟಿಕಾಯತ್ಗೆ ಮಸಿ ಬಳಿದ ಪ್ರಕರಣ: ಈ ಹುಚ್ಚುತನ ಸಹಿಸಲಾಗದು ಎಂದ ಗೃಹ ಸಚಿವರು