ಚಾಮರಾಜನಗರ: ಬಂದ್, ಮುಷ್ಕರ, ಪ್ರತಿಭಟನೆಗಳು ಯಾವುದೇ ನಡೆದರೂ ಬೆಳಗ್ಗೆ 5ಕ್ಕೆ ಏಳುತ್ತೇವೆ. ನಮ್ಮ ಕಾಯಕವನ್ನು ನಾವು ಮಾಡುತ್ತೇವೆ ಸ್ವಾಮಿ ಎಂದು ನಗರದ ಬೀದಿಗಳನ್ನು ಸ್ವಚ್ಛಗೊಳಿಸುತ್ತಿದ್ದ ಪೌರಕಾರ್ಮಿಕರು ಹೇಳಿದ್ದಾರೆ.
ಬಂದ್, ಮುಷ್ಕರ ಏನೇ ನಡೆದರೂ ನಮ್ಮ ಕೆಲಸ ನಿಲ್ಲಲ್ಲ: ಕಾಯಕವೇ ಕೈಲಾಸ ಅಂತಿರೋ ಪೌರಕಾರ್ಮಿಕರು - ಬೀದಿಗಳನ್ನು ಸ್ವಚ್ಛಗೊಳಿಸುತ್ತಿದ್ದ ಪೌರಕಾರ್ಮಿಕರು
ಭಾರತ್ ಬಂದ್ ಹಿನ್ನೆಲೆಯಲ್ಲಿ ಜನರು ವ್ಯಾಪಾರ-ವಹಿವಾಟಿನಲ್ಲಿ ತೊಡಗಿಸಿಕೊಳ್ಳಲು ಹೆಣಗಾಡುತ್ತಿದ್ದರೆ, ಪೌರಕಾರ್ಮಿಕರು ಮಾತ್ರ ನಗರ ಸ್ವಚ್ಛಗೊಳಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಬಂದ್, ಮುಸ್ಕರ ಏನೇ ಇದ್ದರೂ ತಮ್ಮ ಕಾಯಕ ನಿತ್ಯ ನಿರಂತರ ಎಂದಿದ್ದಾರೆ.
work
ಭಾರತ್ ಬಂದ್ ಹಿನ್ನೆಲೆಯಲ್ಲಿ ಜನರು ತಮ್ಮ ನಿತ್ಯ ವ್ಯಾಪಾರ-ವಹಿವಾಟಿನಲ್ಲಿ ತೊಡಗಿಸಿಕೊಳ್ಳಲು ಹೆಣಗಾಡುತ್ತಿದ್ದರೆ, ಪೌರಕಾರ್ಮಿಕರು ಮಾತ್ರ ಸ್ವಚ್ಛಗೊಳಿಸುವ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಈ ವೇಳೆ ವರಮಹಾಲಕ್ಷ್ಮಿ ಎಂಬ ಪೌರ ಕಾರ್ಮಿಕೆ 'ಈಟಿವಿ ಭಾರತ'ದೊಂದಿಗೆ ಮಾತನಾಡಿ, ಯಾವ ಬಂದ್ ಆದರೂ, ಯಾವುದೇ ಮಹಾಮಾರಿ ಬಂದರೂ ನಾವು ಕಾಯಕ ಮುಂದುವರಿಸುತ್ತೇವೆ. ಈ ಕೆಲಸದಲ್ಲಿ ನಮಗೆ ತೃಪ್ತಿ ಇದೆ, ಆರೋಗ್ಯವಾಗಿಯೂ ಇದ್ದೇವೆ ಎಂದು ತಿಳಿಸಿದರು.