ಚಾಮರಾಜನಗರ: ವಿಶ್ವ ಪೌರಕಾರ್ಮಿಕರ ದಿನಾಚರಣೆ ಪ್ರಯುಕ್ತ ಈಶ್ವರಿ ಬ್ರಹ್ಮ ಸಮಾಜ ಹಾಗೂ ಸಮಾಜಸೇವಕ ಎಲ್. ಸುರೇಶ್ ಪೌರಕಾರ್ಮಿಕರನ್ನು ಸನ್ಮಾನಿಸಿ, ಪಾದಗಳಿಗೆ ಪುಷ್ಪನಮನ ಸಲ್ಲಿಸಿದರು.
ಪೌರಕಾರ್ಮಿಕರ ದಿನಾಚರಣೆ: ಸ್ವಚ್ಛತಾ ಯೋಗಿಗಳ ಪಾದಗಳಿಗೆ ಪುಷ್ಪನಮನ - Civil labors day Celebrtion at Chamarajnagar
ಮನೆಗಳ ಮುಂದೆ ರಂಗೋಲಿ ಬಿಡಿಸಿ, ರಸ್ತೆಗಳನ್ನು ಹೂವಿನಿಂದ ಸಿಂಗರಿಸಿ, ಮೆರವಣಿಗೆ ಮೂಲಕ ಕರೆತಂದು ಸನ್ಮಾನಿಸಿ, ಪಾದಗಳಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಪೌರಕಾರ್ಮಿಕರಿಗೆ ವಿಶೇಷ ಗೌರವ ಸಲ್ಲಿಸಲಾಗಿದೆ.
ಮನೆಗಳ ಮುಂದೆ ರಂಗೋಲಿ ಬಿಡಿಸಿ, ರಸ್ತೆಗಳನ್ನು ಹೂವಿನಿಂದ ಸಿಂಗರಿಸಿ, ಮೆರವಣಿಗೆ ಮೂಲಕ ಕರೆತಂದು ಸನ್ಮಾನಿಸಲಾಯಿತು. ಅವರ ಪಾದಗಳಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಪೌರಕಾರ್ಮಿಕರಿಗೆ ಗೌರವ ಸಲ್ಲಿಸಲಾಯಿತು.
ಬ್ರಹ್ಮಕುಮಾರಿ ಸಮಾಜದ ದಾನೇಶ್ವರಿ ಮಾತನಾಡಿ, ಇಂದಿನ ದಿನಗಳಲ್ಲಿ ಸ್ವಚ್ಛತಾ ಆಂದೋಲನದ ಅಬ್ಬರದಲ್ಲಿ ಪೌರಕಾರ್ಮಿಕರನ್ನು ಮರೆಯುತ್ತಿದ್ದೇವೆ. ಒಂದು ದಿನ ಪೌರಕಾರ್ಮಿಕರು ಬರದಿದ್ದರೇ ಇಡೀ ಪ್ರದೇಶದ ವಾತಾವರಣವೇ ಗಬ್ಬೆದ್ದು ನಾರುತ್ತದೆ. ಆದ್ದರಿಂದ, ಪೌರ ಕಾರ್ಮಿಕರ ಸೇವೆಯನ್ನು ಎಲ್ಲರೂ ಎಲ್ಲಾ ದಿನವೂ ನೆನೆಯಬೇಕು ಎಂದರು. ಸಮಾಜ ಸೇವಕ ಎಲ್. ಸುರೇಶ್ ಮಾತನಾಡಿ, ನನಗೆ ಚಿಕ್ಕಂದಿನಿಂದಲೂ ಪೌರಕಾರ್ಮಿಕರನ್ನು ಕಂಡರೇ ಗೌರವ, ಮಮಕಾರ. ಇಂದು ಪೌರ ಕಾರ್ಮಿಕರ ದಿನವಾದ್ದರಿಂದ ಅವರನ್ನು ಸ್ಮರಿಸಬೇಕೆಂದು ಸನ್ಮಾನಿಸಿ ಪಾದಗಳಿಗೆ ಪುಷ್ಪ ನಮನ ಸಲ್ಲಿಸಿದ್ದೇನೆ ಎಂದರು.