ಕರ್ನಾಟಕ

karnataka

ETV Bharat / state

ರಿಲಾಕ್ಸ್ ಮೂಡ್​​ನಲ್ಲಿ ಪೌರಕಾರ್ಮಿಕರು.. ಆಟೋಟ-ಭರ್ಜರಿ ಹೋಳಿಗೆ ಊಟ.. - Chamarajanagar

ದೇಶ ಕಾಯುವ ಯೋಧರ ರೀತಿ ಅನ್ನ ಕೊಡುವ ರೈತ, ಸ್ವಚ್ಛ ಮಾಡುವ ಪೌರ ಕಾರ್ಮಿಕರು ಕೂಡ ಸೈನಿಕರು. ಶೀಘ್ರವೇ ಪೌರ ಕಾರ್ಮಿಕರನ್ನು ಖಾಯಂಗೊಳಿಸುವ ಪ್ರಯತ್ನ ನಡೆಯುತ್ತಿದೆ. ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ..

Chamarajanagar
ಚಾಮರಾಜನಗರ

By

Published : Sep 24, 2021, 8:59 PM IST

ಚಾಮರಾಜನಗರ :ನಿತ್ಯ ಮುಂಜಾನೆ ಎದ್ದು ನಗರದ ಬೀದಿ-ಬೀದಿಗಳನ್ನು ಸ್ವಚ್ಛಗೊಳಿಸುವ ಪೌರ ಕಾರ್ಮಿಕರು ಇಂದು ಜಾಲಿ ಮೂಡ್​​ಗೆ ಜಾರಿದ್ದರು‌. ಬೊಂಬಾಟ್ ಆಟೋಗಳಲ್ಲಿ ಭಾಗಿಯಾಗಿದಷ್ಟೇ ಅಲ್ಲದೇ, ಭರ್ಜರಿ ಹೋಳಿಗೆ ಊಟ ಸವಿದರು.

ರಿಲಾಕ್ಸ್ ಮೂಡ್​​ನಲ್ಲಿ ಪೌರಕಾರ್ಮಿಕರು.. ಬೊಂಬಾಟ್ ಊಟ-ಆಟೋಟ..

ಪೌರ ಕಾರ್ಮಿಕರ ದಿನದ ಪ್ರಯುಕ್ತ ಇಂದು ಚಾಮರಾಜನಗರ ನಗರಸಭೆ ವತಿಯಿಂದ ಆಯೋಜಿಸಿದ್ದ ಅಟೋಟ ಕಾರ್ಯಕ್ರಮಗಳಲ್ಲಿ ಭಾಗಿಯಾದ 50ಕ್ಕೂ ಹೆಚ್ಚು ಪೌರಕಾರ್ಮಿಕರು ಓಟ, ಮ್ಯೂಸಿಕಲ್ ಚೇರ್, ಹಗ್ಗ-ಜಗ್ಗಾಟ, ಪಾಸಿಂಗ್‌ದ ಬಾಲ್ ಆಟಗಳನ್ನು ಆಡಿ ಆನಂದಿಸಿದರು. ಬಳಿಕ ಸಿಡಿಎಸ್ ಭವನದಲ್ಲಿ ರುಚಿಯಾದ ಹೋಳಿಗೆ ಊಟ ಸವಿದು ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಸಂಭ್ರಮಿಸಿದರು.

ಪೌರ ಕಾರ್ಮಿಕರು ಕೂಡ ಸೈನಿಕರು :ಸಭಾ ಕಾರ್ಯಕ್ರಮದಲ್ಲಿ ಯೋಜನಾ ನಿರ್ದೇಶಕ ಸುರೇಶ್ ಮಾತನಾಡಿ, ದೇಶ ಕಾಯುವ ಯೋಧರ ರೀತಿ ಅನ್ನ ಕೊಡುವ ರೈತ, ಸ್ವಚ್ಛ ಮಾಡುವ ಪೌರ ಕಾರ್ಮಿಕರು ಕೂಡ ಸೈನಿಕರು. ಶೀಘ್ರವೇ ಪೌರ ಕಾರ್ಮಿಕರನ್ನು ಖಾಯಂಗೊಳಿಸುವ ಪ್ರಯತ್ನ ನಡೆಯುತ್ತಿದೆ. ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ ಎಂದು ಭರವಸೆ ನೀಡಿದರು.

ABOUT THE AUTHOR

...view details