ಕರ್ನಾಟಕ

karnataka

ETV Bharat / state

ಚಿಣ್ಣರ ಬೈಗುಳವೇ ದೇವರಿಗೆ ಮಂತ್ರ.. ಗುಂಡ್ಲುಪೇಟೆ ಬೊಮ್ಮಲಾಪುರದಲ್ಲಿ ವಿಶಿಷ್ಟ ಆಚರಣೆ!! - different celebration at Bommalapur in Gundlupeta

ಹಿರಿಯರು ಪ್ರಾರಂಭಿಸಿದ ಬೈಗುಳ ಹಬ್ಬ ಈಗ ಚಿಣ್ಣರಿಗಷ್ಟೇ ಮೀಸಲಾಗಿದೆ. ಗ್ರಾಮದ ಪ್ರತಿ ಅಂಗಡಿ-ಮುಂಗಟ್ಟುಗಳ ಮುಂದೆ ದೇವರಿಗೆ ಮಕ್ಕಳು ಅಶ್ಲೀಲವಾಗಿ ಬೈದು ಅಂಗಡಿಯವರು ಕೊಡುವ ಕಾಣಿಕೆ ರೂಪದ ಹಣದಲ್ಲಿ ಮಾರಮ್ಮನಿಗೆ ಪೂಜೆ ಸಲ್ಲಿಸುತ್ತಾರೆ. ವರ್ಷದಿಂದ ವರ್ಷಕ್ಕೆ ಈ ಆಚರಣೆ ಹೊಸ ರಂಗು ಪಡೆಯುತ್ತಿದೆ‌..

ಚಿಣ್ಣರ ಬೈಗುಳವೇ ದೇವರಿಗೆ ಮಂತ್ರ
ಚಿಣ್ಣರ ಬೈಗುಳವೇ ದೇವರಿಗೆ ಮಂತ್ರ

By

Published : Jul 8, 2020, 7:19 PM IST

Updated : Jul 8, 2020, 7:42 PM IST

ಚಾಮರಾಜನಗರ :ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ಪ್ರತಿ ಆಷಾಢ ಮಾಸದ ಬಸವಣ್ಣ ಹಬ್ಬದ ಬಳಿಕ ಬರುವ 2ನೇ ಬುಧವಾರ, ವರಂಜಿ ಹಬ್ಬವನ್ನು ಆಚರಿಸಲಾಗುತ್ತಿದೆ.

ಈ ಹಬ್ಬವನ್ನು ನಾಯಕ ಸಮುದಾಯದವರು ನೂರಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಹಬ್ಬದ ವಿಶೇಷವೆಂದ್ರೇ ಮಕ್ಕಳು ದೇವರಿಗೆ ಅಶ್ಲೀಲವಾಗಿ ಬೈಯುತ್ತಾರೆ. ದಶಕಗಳ ಹಿಂದೆ ಮಾರಮ್ಮನ ಗುಡಿ ಮುಂಭಾಗ, ಗ್ರಾಮ ದೇವತೆಯಾದ ಪಟ್ಟದರಾಣಿ ದೇಗುಲ ಮುಂಭಾಗ ಮಹಿಳೆಯರು, ಹಿರಿಯರು ದೇವರನ್ನು ಅಶ್ಲೀಲವಾಗಿ ಬೈದು ಮಾರಮ್ಮನನ್ನು ಆರಾಧಿಸುತ್ತಿದ್ದರು‌‌. ಕಾಲ ಸರಿದಂತೆ, ಹಿರಿಯರು ಈ ಆಚರಣೆಯನ್ನು ಕೈ ಬಿಟ್ಟಿದ್ದು ಚಿಣ್ಣರು ಮುಂದುವರೆಸಿದ್ದಾರೆ.

ಚಿಣ್ಣರ ಬೈಗುಳವೇ ದೇವರಿಗೆ ಮಂತ್ರ

ದೇವರಿಗೆ ಬೈಯಲು ಕಾರಣವೇನು ?:ದೇವರಿಗೆಕೆ ಬೈತಾರೆ..: ಬೊಮ್ಮಲಾಪುರ ಗ್ರಾಮದಲ್ಲಿ ಮಣಿಯಮ್ಮ, ಮಾಸ್ತಮ್ಮ, ಕಾಳವ್ವ, ಚಿಕ್ಕದೇವಮ್ಮ,ಕೊಂಬಿನ ಕಾಳವ್ವ, ಚಿಕ್ಕ ಮಾರಮ್ಮ, ದೊಡ್ಡ ಮಾರಮ್ಮ ಎಂಬ 7 ಮಾರಿಗಳು ನೆಲೆಸಿದ್ದರಂತೆ. ಇವರಲ್ಲಿ ಮಣಿಯಮ್ಮ ಎಂಬ ಮಾರಿ ಬೈಗುಳ ಪ್ರಿಯೆಯಾಗಿದ್ದು, ಗ್ರಾಮಸ್ಥರು ತನಗೆ ಬೈಯ್ಯುವುದಿಲ್ಲ ಎಂದು ಪರ ಊರಿಗೆ ಹೊರಟಳಂತೆ.

ಅವಳು, ಹೊರಟ್ಟಿದೇ ತಡ ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳು ಕಾಲಿಟ್ಟು ಹಲವು ಮಂದಿ ಮೃತಪಟ್ಟರಂತೆ. ಇದರಿಂದ ಎಚ್ಚೆತ್ತ ಗ್ರಾಮದ ಹಿರಿಯರು ಆಕೆಯನ್ನು ಬೈದು ಸಂತುಷ್ಟಗೊಳಿಸಿ ತಮ್ಮ ಗ್ರಾಮದಲ್ಲೇ ನೆಲೆವೂರುವಂತೆ ಮಾಡಿದರು ಎಂಬುದು ಈ ಆಚರಣೆ ಹಿಂದಿನ ಕಥೆ. ಹಿರಿಯರು ಪ್ರಾರಂಭಿಸಿದ ಬೈಗುಳ ಹಬ್ಬ ಈಗ ಚಿಣ್ಣರಿಗಷ್ಟೇ ಮೀಸಲಾಗಿದೆ. ಗ್ರಾಮದ ಪ್ರತಿ ಅಂಗಡಿ-ಮುಂಗಟ್ಟುಗಳ ಮುಂದೆ ದೇವರಿಗೆ ಮಕ್ಕಳು ಅಶ್ಲೀಲವಾಗಿ ಬೈದು ಅಂಗಡಿಯವರು ಕೊಡುವ ಕಾಣಿಕೆ ರೂಪದ ಹಣದಲ್ಲಿ ಮಾರಮ್ಮನಿಗೆ ಪೂಜೆ ಸಲ್ಲಿಸುತ್ತಾರೆ. ವರ್ಷದಿಂದ ವರ್ಷಕ್ಕೆ ಈ ಆಚರಣೆ ಹೊಸ ರಂಗು ಪಡೆಯುತ್ತಿದೆ‌.

Last Updated : Jul 8, 2020, 7:42 PM IST

ABOUT THE AUTHOR

...view details