ಕೊಳ್ಳೇಗಾಲ(ಚಾಮರಾಜನಗರ): ಪಟ್ಟಣದ ಮುಡಿಗುಂಡ ಗ್ರಾಮದ ಆದರ್ಶ ವಿದ್ಯಾಲಯದ 13 ವಿದ್ಯಾರ್ಥಿಗಳಿಗೆ ಕೊರೊನಾ ದೃಢಪಟ್ಟಿದ್ದು, ಮೂರು ದಿನಗಳ ಕಾಲ ಶಾಲೆಗೆ ರಜೆ ನೀಡುವಂತೆ ಬಿಇಒ ಚಂದ್ರ ಪಾಟೀಲ್ ಸೂಚನೆ ನೀಡಿದ್ದಾರೆ.
ಮುಡಿಗುಂಡ ಗ್ರಾಮದ ಆದರ್ಶ ವಿದ್ಯಾಲಯದ ವಿದ್ಯಾರ್ಥಿ ಒಬ್ಬರಿಗೆ ಸೋಮವಾರ ವೈರಸ್ ದೃಢಪಟ್ಟಿದೆ. ಈ ಹಿನ್ನೆಲೆ ಎಲ್ಲಾ ಮಕ್ಕಳಿಗೂ ಕೋವಿಡ್ ತಪಾಸಣೆ ಮಾಡಿಸಲಾಗಿದ್ದು, ಫಲಿತಾಂಶದ ಬಳಿಕ 13 ಮಕ್ಕಳಿಗೆ ಸೋಂಕು ತಗುಲಿರುವುದು ದೃಢವಾಗಿದೆ.