ಕರ್ನಾಟಕ

karnataka

ETV Bharat / state

ಮಾದಪ್ಪನ ಬೆಟ್ಟದಲ್ಲಿ ಆನೆ ದಂತ ಹಿಡಿದು ಆಟವಾಡಿದ ಮಕ್ಕಳು.. ಡಿ‌ಎಫ್‌ಒ ಪ್ರತಿಕ್ರಿಯೆ

ಆನೆಯ ಎಡಭಾಗದ ದಂತ‌ ಇದಾಗಿದ್ದು, ದಂತ‌ದ ಕೆಲಭಾಗ ಮುರಿದಿದೆ. ಇದಕ್ಕೆ ಸಂಬಂಧಿಸಿದಂತೆ ತೀವ್ರ ತನಿಖೆ‌ ನಡೆಸಲಾಗುತ್ತಿದ್ದು, ಪ್ರಕರಣ ದಾಖಲಾಗಿದೆ.

Children playing elephant ivory in Madappana hill
ಆನೆ ದಂತ

By

Published : Feb 1, 2021, 6:51 PM IST

Updated : Feb 2, 2021, 12:06 AM IST

ಕೊಳ್ಳೇಗಾಲ : ಆನೆದಂತ ಹಿಡಿದು ಮಕ್ಕಳು‌ ಆಟವಾಡುತ್ತಿದ್ದ ಘಟನೆ ತಾಲೂಕಿನ ಮಾದಪ್ಪನ‌ ಬೆಟ್ಟದ ತಮ್ಮಡಗೇರಿಯಲ್ಲಿ ನಡೆದಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

ಮಾದಪ್ಪನ ಬೆಟ್ಟದಲ್ಲಿ ಆನೆ ದಂತ ಹಿಡಿದು ಆಟವಾಡಿದ ಮಕ್ಕಳು

ಮಾದಪ್ಪನ ಬೆಟ್ಟದ ತಪಲಿನ ಹೊಸಕೊಳ ಸಮೀಪದ ತಮ್ಮಡಿಗೇರಿಯಿಂದ ಹುಲಿಗೂಡಿಗೆ ಹೋಗುವ ರಸ್ತೆಯಲ್ಲಿ ಮಕ್ಕಳು ಆನೆದಂತ ಹಿಡಿದು ಆಟವಾಡುತ್ತಿದ್ದರು. ಸ್ಥಳೀಯ ಜಿಪಂ ಸದಸ್ಯರೊಬ್ಬರು ನೀಡಿದ ಮಾಹಿತಿ ಹಿನ್ನೆಲೆ ಎಚ್ಚೆತ್ತ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದರು.

ಅಷ್ಟರಲ್ಲಿ ಆಟವಾಡುತ್ತಿದ್ದ ಮಕ್ಕಳಿಂದ ದಂತ ರಸ್ತೆಯ ಪಕ್ಕದ ತಿಪ್ಪೆಗುಂಡಿ ಸೇರಿತ್ತು. ಸದ್ಯ ಆನೆ ದಂತವನ್ನು ಕಂಡ ಅರಣ್ಯಾಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ.

ಓದಿ-ದೇಶದ ಇತಿಹಾಸದಲ್ಲೇ ಇಂತಹ ನಿರುತ್ಸಾಹದ ಬಜೆಟ್ ಕಂಡಿಲ್ಲ: ಡಿಕೆಶಿ

ಈ‌ ಕುರಿತು ಈಟಿವಿ ಜೊತೆ ಮಾತನಾಡಿದ ಡಿಎಫ್‌ಒ ಎಳುಕುಂಡಲು, ಮಕ್ಕಳು ಆನೆ ದಂತ ಹಿಡಿದು ಆಟವಾಡುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಅರಣ್ಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ.

ಆನೆಯ ಎಡಭಾಗದ ದಂತ‌ ಇದಾಗಿದ್ದು, ದಂತ‌ದ ಕೆಲಭಾಗ ಮುರಿದಿದೆ. ಇದಕ್ಕೆ ಸಂಬಂಧಿಸಿದಂತೆ ತೀವ್ರ ತನಿಖೆ‌ ನಡೆಸಲಾಗುತ್ತಿದ್ದು, ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು.

Last Updated : Feb 2, 2021, 12:06 AM IST

ABOUT THE AUTHOR

...view details