ಕರ್ನಾಟಕ

karnataka

ETV Bharat / state

ಕೊಳ್ಳೇಗಾಲದಲ್ಲಿ ತಡವಾಗಿ ಬೆಳಕಿಗೆ ಬಂದ ಬಾಲ್ಯ ವಿವಾಹ: ಪ್ರಕರಣ ದಾಖಲು - Child marriage case in Kollegala

ಅಪ್ರಾಪ್ತೆಯೋರ್ವಳ ಮದುವೆ ಮಾಡಿಸಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ.

Child marriage case in Kollegala
Child marriage case in Kollegala

By

Published : Dec 17, 2021, 1:46 AM IST

ಕೊಳ್ಳೇಗಾಲ:ತಾಲ್ಲೂಕಿನ ಗ್ರಾಮವೊಂದರಲ್ಲಿ ಅಪ್ರಾಪ್ತೆಯೋರ್ವಳ ಮದುವೆ ಮಾಡಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಥಮ ಪಿಯುಸಿ ವ್ಯಾಸಂಗ ಮಾಡ್ತಿದ್ದ 17 ವರ್ಷದ ಅಪ್ರಾಪ್ತೆಯನ್ನು ಪೋಷಕರು ಅದೇ ಗ್ರಾಮದ ಯುವಕನೊಂದಿಗೆ ವಿವಾಹ ಮಾಡಿಸಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.

ಘಟನೆ ವಿವರ:ಅಪ್ರಾಪ್ತೆಯು ಸಂಬಂಧದಲ್ಲಿ ತನ್ನ ಅತ್ತೆ ಮಗನೊಂದಿಗೆ ಸೆಪ್ಟೆಂಬರ್​​ 15ರಂದು ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿದ್ದು, ಆ ರಾತ್ರಿ ಲಾಡ್ಜ್​​ವೊಂದರಲ್ಲಿ ಉಳಿದುಕೊಂಡಿದ್ದಾರೆ. ಈ ವೇಳೆ ಇಬ್ಬರ ನಡುವೆ ದೈಹಿಕ ಸಂಪರ್ಕ ಏರ್ಪಟ್ಟಿದ್ದು. ಮಾರನೇ ದಿನ ಊರಿಗೆ ಹಿಂದಿರುಗಿದ್ದಾರೆ. ಈ ವೇಳೆ ತಮ್ಮ ಮಗಳು, ಯುವಕನೊಂದಿಗೆ ಬೆಟ್ಟಕ್ಕೆ ಹೋಗಿರುವ ವಿಚಾರ ತಿಳಿದಿದ್ದಾರೆ. ಈ ವೇಳೆ ಹುಡುಗಿ ತಂದೆ-ತಾಯಿ ನಮ್ಮ ಮಗಳನ್ನು ಇನ್ಯಾರು ಮದುವೆ ಮಾಡಿಕೊಳ್ಳುತ್ತಾರೆಂದು ಯೋಚಿಸಿ, ಯುವಕನ ತಂದೆಯ ಜೊತೆ ಮಾತುಕತೆ ನಡೆಸಿ ಅಕ್ಟೋಬರ್​​ 15 ರಂದು ಅಪ್ರಾಪ್ತೆಯನ್ನ ಯುವಕನೊಂದಿಗೆ ಮದುವೆ ಮಾಡಿಸಿದ್ದಾರೆಂದು ತಿಳಿದು ಬಂದಿದೆ.

ಹುಡುಗಿ ಅಪ್ರಾಪ್ತೆಯಾಗಿದ್ದ ಕಾರಣ ತವರು ಮನೆಯಲ್ಲಿಯೇ ಇಟ್ಟುಕೊಳ್ಳಲಾಗಿತ್ತು. ಆದರೆ, ಮನೆಯಲ್ಲಿ ಯಾರು ಇಲ್ಲದ ವೇಳೆ ಯುವಕ ತನ್ನೊಂದಿಗೆ ಲೈಂಗಿಕ ಸಂಪರ್ಕ ನಡೆಸಿದ್ದಾನೆಂದು ಆರೋಪಿಸಿ ಅಪ್ರಾಪ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ.

ಇದನ್ನೂ ಓದಿರಿ:30 ವರ್ಷದ ವಿಧವೆಯ ಕೈ ಹಿಡಿದ 50 ವರ್ಷದ ವರ... ಇದೊಂದು ವಿಭಿನ್ನ ಪ್ರೇಮ ಕಹಾನಿ!

ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಫೋಕ್ಸೊ ಕಾಯ್ದೆ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details