ಕರ್ನಾಟಕ

karnataka

ETV Bharat / state

ಚಾಮರಾಜನಗರ: ಮೂರು ಬಾಲ್ಯ ವಿವಾಹ ನಿಲ್ಲಿಸಿದ ಮಕ್ಕಳ ಸಹಾಯವಾಣಿ ಸಿಬ್ಬಂದಿ - ಬಾಲ್ಯ ವಿವಾಹ

ಚಾಮರಾಜನಗರದಲ್ಲಿ ಮಕ್ಕಳ ಸಹಾಯವಾಣಿ ತಂಡ ಕಳೆದ ಮೂರು ದಿನಗಳಲ್ಲಿ ನಡೆಯಬೇಕಿದ್ದ ಬಾಲ್ಯ ವಿವಾಹಗಳನ್ನು ತಡೆದಿದ್ದಾರೆ.

Child helpline staff stopped three child marriages
ಬಾಲ್ಯ ವಿವಾಹ ನಿಲ್ಲಿಸಿದ ಮಕ್ಕಳ ಸಹಾಯವಾಣಿ ಸಿಬ್ಬಂದಿ

By

Published : Aug 25, 2021, 8:27 PM IST

ಚಾಮರಾಜನಗರ:ಕಳೆದ ಮೂರು‌ ದಿನಗಳಲ್ಲಿ ನಡೆಯಬೇಕಿದ್ದ ಮೂರು ಬಾಲ್ಯವಿವಾಹಗಳನ್ನು ಮಕ್ಕಳ ಸಹಾಯವಾಣಿ ಸಿಬ್ಬಂದಿ ನಿಲ್ಲಿಸಿ ಪಾಲಕರಿಗೆ ಅರಿವು ಮೂಡಿಸಿದ್ದಾರೆ.

ಹನೂರು ತಾಲೂಕಿನ ಕೂಡ್ಲೂರು ಗ್ರಾಮದಲ್ಲಿ ಸೋಮವಾರ ಎರಡು ವಿವಾಹಗಳನ್ನು ಸಹಾಯವಾಣಿ ಸಿಬ್ಬಂದಿ ನಿಲ್ಲಿಸಿದ್ದರು. ಇಂದು ಕೋಲಾರದ ಬಾಲಕಿಗೆ ಹನೂರು ತಾಲೂಕಿನ ಗುಳ್ಯದಲ್ಲಿ ಏರ್ಪಡಿಸಿದ್ದ ವಿವಾಹವನ್ನು ತಡೆದಿದ್ದಾರೆ.

ಗುಳ್ಯ ಗ್ರಾಮದ ಗೋವಿಂದಯ್ಯ ಎಂಬುವವರ ಮಗನಿಗೆ ಕೋಲಾರ ಜಿಲ್ಲೆಯ ಚಿಕ್ಕತಿರುಪತಿ ಗ್ರಾಮದ ಕುಟುಂಬವೊಂದರ ಬಾಲಕಿಯನ್ನು ನಿಶ್ಚಯ ಮಾಡಲಾಗಿತ್ತು. ಈ ಹಿನ್ನೆಲೆ ಮುನಿಯಪ್ಪನ ದೊಡ್ಡಿಯಲ್ಲಿ ವಿವಾಹವನ್ನು ನೆರವೇರಿಸಲು ಅಗತ್ಯ ಸಿದ್ಧತೆಗಳನ್ನೂ ಸಹ ಮಾಡಿಕೊಳ್ಳಲಾಗಿತ್ತು.

ಈ ವಿಚಾರ ತಿಳಿದು ಮಕ್ಕಳ ಸಹಾಯವಾಣಿ ತಂಡವು ದೌಡಾಯಿಸಿ ವಿವಾಹ ತಡೆದಿದೆ. ಬಾಲ್ಯ ವಿವಾಹದ ಬಗ್ಗೆ ಕಾನೂನಿನ ಕುರಿತಂತೆ ಕುಟುಂಬಸ್ಥರಲ್ಲಿ ಅರಿವು ಮೂಡಿಸಿದ್ದಾರೆ.

ಓದಿ: ಅತ್ಯಾಚಾರ ಸಂತ್ರಸ್ತೆ ಆರೋಗ್ಯ ಸ್ಥಿರ.. ಇಂಥಾ ದುರ್ಘಟನೆಗಳು ಮರುಕಳಿಸದಂತೆ ಕ್ರಮ: ಸಚಿವ ಸೋಮಶೇಖರ್

ABOUT THE AUTHOR

...view details