ಚಾಮರಾಜನಗರ:ಒಂದೂವರೆ ತಿಂಗಳಿನಿಂದ ವಿಚಿತ್ರ ಜ್ವರಕ್ಕೆ ಉಯಿಲನತ್ತ ಗ್ರಾಮದ 20ಕ್ಕೂ ಹೆಚ್ಚು ಮಂದಿ ಬಳಲುತ್ತಿರುವುದು ಚಿಕೂನ್ ಗುನ್ಯಾದಿಂದ ಎಂದು ದೃಢಪಟ್ಟಿದೆ ಎಂದು ಡಿಹೆಚ್ಒ ಡಾ. ಎಂ.ಸಿ.ರವಿ 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದರು.
ಜ್ವರದಿಂದ ಬಳಲುತ್ತಿದ್ದವರ ಮೂತ್ರದ ಮಾದರಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈಗ ಅದರ ಫಲಿತಾಂಶ ಬಂದಿದ್ದು, ಇಬ್ಬರಿಗೆ ಚಿಕೂನ್ ಗುನ್ಯಾ ಇರುವುದು ಖಚಿತವಾಗಿದೆ. ಆದರೆ, ಗೀತಾ (23) ಎಂಬ ಯುವತಿ ಮೃತಪಟ್ಟಿರುವುದು ಚಿಕೂನ್ ಗುನ್ಯಾದಿಂದಲ್ಲ, ಎದೆನೋವಿನಿಂದ ಎಂದು ಸ್ಪಷ್ಟಪಡಿಸಿದರು. ಗ್ರಾಮಸ್ಥರು ಆತಂಕಕ್ಕೆ ಒಳಗಾಗಬೇಡಿ ಎಂದು ಧೈರ್ಯ ತುಂಬಿದರು.