ಚಾಮರಾಜನಗರ: ಇತ್ತೀಚೆಗಷ್ಟೇ ತಡೆಗೋಡೆ ಮೇಲೆ ಹೊಳಪಿನ ಕಣ್ಣು, ಭಾರಿ ಗಾತ್ರದ ಮೂಲಕ ನೋಡುಗರ ಬೆವರಿಳಿಸಿದ್ದ ಚಿರತೆ, ಮತ್ತೇ ಅದೇ ಜಾಗದಲ್ಲಿ ನಿನ್ನೆ ರಾತ್ರಿ ಆರಾಮವಾಗಿ ನಿದ್ರಿಸುತ್ತಿದ್ದ ವಿಡಿಯೋ ಈಟಿವಿ ಭಾರತಕ್ಕೆ ಲಭ್ಯವಾಗಿದೆ.
ಹಾರ್ನ್ ಮಾಡಿದ್ದಕ್ಕೆ ನಿದ್ದೆಯಿಂದ ಎದ್ದು ಗುರಾಯಿಸಿದ ಚಿರತೆ: ವಿಡಿಯೋ ವೈರಲ್ - undefined
ಬೆಂಗಳೂರು- ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿ ಬಳಿ ತಡೆಗೋಡೆ ಮೇಲೆ ಮಲಗಿ ನಿದ್ರಿಸುತ್ತಿದ್ದ ಭಾರಿ ಗಾತ್ರದ ಚಿರತೆ, ಲಾರಿ ಚಾಲಕ ಹಾರ್ನ್ ಮಾಡಿದ್ದಕ್ಕೆ ಗುರಾಯಿಸಿದ ರೀತಿ ಬೆಚ್ಚಿಬೀಳಿಸಿದೆ.
![ಹಾರ್ನ್ ಮಾಡಿದ್ದಕ್ಕೆ ನಿದ್ದೆಯಿಂದ ಎದ್ದು ಗುರಾಯಿಸಿದ ಚಿರತೆ: ವಿಡಿಯೋ ವೈರಲ್](https://etvbharatimages.akamaized.net/etvbharat/prod-images/768-512-3703056-thumbnail-3x2-megha.jpg)
ಭಾರಿ ಗಾತ್ರದ ಚಿರತೆಯೊಂದು ಬೆಂಗಳೂರು- ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿಯ ತಮಿಳುನಾಡಿಗೆ ಒಳಪಡುವ ದಿಂಬಂ ರಸ್ತೆಯ 24ನೇ ಕರ್ವ್ನ ತಡೆಗೋಡೆ ಮೇಲೆ ಮಲಗಿ ನಿದ್ರಿಸುತ್ತಿದ್ದ ವೇಳೆ ಲಾರಿ ಚಾಲಕನೋರ್ವ ವಾಹನ ನಿಲ್ಲಿಸಿ ವಿಡಿಯೋ ಮಾಡುತ್ತಿರುತ್ತಾನೆ. ಪಕ್ಕದಲ್ಲಿದ್ದವನು " ಏನಪ್ಪಾ ಆರಡಿ ಇದೆ, ಗ್ಲಾಸ್ ಹಾಕಪ್ಪ ಬೇಗ- ಬೇಗ" ಎನ್ನುತ್ತಾನೆ. ಬಳಿಕ ಗ್ಲಾಸ್ ಏರಿಸಿ ಲಾರಿ ಚಾಲಕ ಹಾರ್ನ್ ಮಾಡುತ್ತಾನೆ. ಹಾರ್ನ್ ಶಬ್ಧ ಕೇಳಿದ ಚಿರತೆ ಒಮ್ಮೆ ಲಾರಿಯತ್ತ ಗುರಾಯಿಸಿ ಮತ್ತೇ ನಿದ್ರೆಗೆ ಜಾರಿದೆ. ಇದನ್ನು ಕಂಡ ಚಾಲಕ ಬೆಚ್ಚಿ ಬೆರಗಾಗುವ ದೃಶ್ಯ ವಿಡಿಯೋದಲ್ಲಿದೆ.
ಸತ್ಯಮಂಗಲ ಅರಣ್ಯ ಪ್ರದೇಶಕ್ಕೆ ಒಳಪಡುವ ರಸ್ತೆಯಲ್ಲಿ ಆಗಾಗ ಚಿರತೆಗಳು ಕಂಡರೂ, ರಾತ್ರಿ ವೇಳೆಯಲ್ಲಿ ಈ ಪರಿ ಗಾತ್ರದ ಚಿರತೆ ಕಾಣಸಿಗುವುದು ಅಪರೂಪ ಎನ್ನುತ್ತವೆ ಮೂಲಗಳು.