ಕರ್ನಾಟಕ

karnataka

ETV Bharat / state

ಗುಂಡ್ಲುಪೇಟೆಯಲ್ಲಿ ಚಿರತೆ ಸೆರೆ - ಚಾಮರಾಜನಗರದಲ್ಲಿ ಮತ್ತೊಂದು ಚಿರತೆ ದಾಳಿ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ಅರಣ್ಯ ವಲಯದ ವ್ಯಾಪ್ತಿಗೆ ಒಳಪಡುವ ಕುಣಗಳ್ಳಿ ಗ್ರಾಮದಲ್ಲಿಟ್ಟಿದ್ದ ಬೋನಿಗೆ ಅಂದಾಜು 6 ವರ್ಷದ ಗಂಡು ಚಿರತೆ ಬಿದ್ದಿದೆ. ಮತ್ತೊಂದು ಪ್ರಕರಣದಲ್ಲಿ, ಚಾಮರಾಜನಗರ ತಾಲೂಕಿನ ಹರವೆ ಹೋಬಳಿಯ ಉಡಿಗಾಲ ಗ್ರಾಮದಲ್ಲಿ ಶಿವಪ್ಪ ಎಂಬವರಿಗೆ ಸೇರಿದ ಎರಡು ಕುರಿಗಳ ಮೇಲೆ ಚಿರತೆ ದಾಳಿ ಮಾಡಿ ಕೊಂದು ಹಾಕಿದೆ.

By

Published : Mar 10, 2021, 12:37 PM IST

cheetah catch up at chamrajnagar
ಗುಂಡ್ಲುಪೇಟೆಯಲ್ಲಿ ಚಿರತೆ ಸೆರೆ - ಚಾಮರಾಜನಗರದಲ್ಲಿ ಚಿರತೆ ದಾಳಿ

ಚಾಮರಾಜನಗರ: ಹಲವು ದಿನಗಳಿಂದ ಜನರಿಗೆ ಉಪಟಳ ನೀಡುತ್ತಿದ್ದ ಚಿರತೆಯೊಂದು ಇದೀಗ ಬೋನಿಗೆ ಬಿದ್ದಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಕುಣಗಳ್ಳಿ ಗ್ರಾಮದಲ್ಲಿ ನಡೆದಿದೆ.

ಚಿರತೆ ಸೆರೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ಅರಣ್ಯ ವಲಯದ ವ್ಯಾಪ್ತಿಗೆ ಒಳಪಡುವ ಕುಣಗಳ್ಳಿ ಗ್ರಾಮದಲ್ಲಿಟ್ಟಿದ್ದ ಬೋನಿಗೆ ಅಂದಾಜು 6 ವರ್ಷದ ಗಂಡು ಚಿರತೆ ಬಿದ್ದಿದೆ. ಈ ಹಿಂದೆ ಸಾಕಷ್ಟು ಬೀದಿ ನಾಯಿಗಳು, ಜಾನುವಾರುಗಳ ಮೇಲೆ ದಾಳಿ ನಡೆಸಿದ್ದ ಈ ಚಿರತೆ ಮಂಗಳವಾರವೂ ಕರುವೊಂದನ್ನು ಬಲಿ ಪಡೆದಿತ್ತು. ಸದ್ಯ ಈ ಚಿರತೆ ಸೆರೆಯಾಗಿದ್ದು, ತಮಿಳುನಾಡು-ಕರ್ನಾಟಕ ಗಡಿಯಲ್ಲಿ ಇದನ್ನು ಕಾಡಿಗೆ ಬಿಡಲಾಗುತ್ತದೆ ಎಂದು ಆರ್​ಎಫ್​​​ಒ ನವೀನ್ ಕುಮಾರ್ ತಿಳಿಸಿದ್ದಾರೆ.

ಚಿರತೆ ದಾಳಿ:

ಚಾಮರಾಜನಗರ ತಾಲೂಕಿನ ಹರವೆ ಹೋಬಳಿಯ ಉಡಿಗಾಲ ಗ್ರಾಮದಲ್ಲಿ ಶಿವಪ್ಪ ಎಂಬವರಿಗೆ ಸೇರಿದ ಎರಡು ಕುರಿಗಳ ಮೇಲೆ ಚಿರತೆ ದಾಳಿ ಮಾಡಿ ಕೊಂದು ಹಾಕಿದೆ.

ಇದನ್ನೂ ಓದಿ:ಮೈಸೂರು: ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಸೆರೆ

ಒಂದು ಕುರಿಯನ್ನು ಸಂಪೂರ್ಣ ತಿಂದುಹಾಕಿದ ಚಿರತೆ ಬಳಿಕ ಪರಾರಿಯಾಗಿದೆ. ಪರಿಣಾಮ, ರೈತರು ಚಿರತೆ ಸೆರೆಹಿಡಿಯಬೇಕೆಂದು ಒತ್ತಾಯಿಸಿದ್ದಾರೆ.

ABOUT THE AUTHOR

...view details