ಕೊಳ್ಳೇಗಾಲ: ನಗರದ ಖಾಸಗಿ ಫೈನಾನ್ಸ್ ಸಂಸ್ಥೆಯೊಂದು ಜನರಿಂದ ಲಕ್ಷಾಂತರ ರೂ. ಪಿಗ್ಮಿ ಹಣ ಕಟ್ಟಿಸಿಕೊಂಡು ವಂಚಿಸಿರುವ ಆರೋಪ ಕೇಳಿಬಂದಿದೆ.
ಕೊಳ್ಳೇಗಾಲದ ವೀರಭದ್ರ ಕಾಂಪ್ಲೆಕ್ಸ್ನಲ್ಲಿ ಜೀವನ ಉದಯಕಾಲ ಸಂಸ್ಥೆ ಎಂಬ ಹೆಸರಿನಲ್ಲಿ ನಡೆಸಲಾಗುತ್ತಿದ್ದ ಖಾಸಗಿ ಫೈನಾನ್ಸ್ ಸಂಸ್ಥೆ ಜನರಿಗೆ ಲಕ್ಷಾಂತರ ರೂ. ಹಣ ವಂಚಿಸಿದೆ ಎಂದು ವಂಚನೆಗೊಳಗಾದವರು ಆರೋಪಿಸಿದ್ದಾರೆ.
ಈ ಫೈನಾನ್ಸ್ ಸಂಸ್ಥೆ ಪ್ರತಿ ದಿನ ಪಿಗ್ಮಿದಾರರ ಬಳಿ ಹಣ ಕಟ್ಟಿಸಿಕೊಳ್ಳುತ್ತಿತ್ತು. ಕೆಲ ವರ್ಷಗಳಿಂದ ಜನರು ಹಣ ಕಟ್ಟಿ, ಬಳಿಕ ಪಡೆದು ವ್ಯವಹರಿಸುತ್ತಿದ್ದರು. ಆದರೆ ಕಳೆದ ನ. 24 ರಿಂದ ಜೀವನ ಉದಯಕಾಲ ಫೈನಾನ್ಸ್ ಸಂಸ್ಥೆ ಮುಚ್ಚಿದ್ದು, ಗಾಬರಿಗೊಂಡ ಜನರು ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಈ ಫೈನಾನ್ಸ್ ಸಂಸ್ಥೆಯ ಜೊತೆ ವ್ಯವಹಾರ ಮಾಡಿದ್ದು, ಸಾರ್ವಜನಿಕರಿಗೆ ಸೇರಿದ ಲಕ್ಷಗಟ್ಟಲೆ ಪಿಗ್ಮಿ ಹಣ ವಂಚನೆಯಾಗಿದೆ ಎಂದು ಆರೋಪಿಸಿದ್ದಾರೆ.