ಚಾಮರಾಜನಗರ:ನಿಮ್ಮಬ್ಯಾಂಕ್ ಖಾತೆ ರದ್ದಾಗಲಿದೆ, ಆ್ಯಪ್ ಅಪ್ಡೇಟ್ ಮಾಡಿ ಎಂದು ಬಂದ ಮೆಸೇಜ್ ಅನ್ನು ವ್ಯಕ್ತಿಯೊಬ್ಬರು ಕ್ಲಿಕ್ ಮಾಡಿದ್ದಾರೆ. ಬಳಿಕ ಅವರ ಖಾತೆಯಲ್ಲಿದ್ದ ಲಕ್ಷಾಂತರ ರೂಪಾಯಿ ಹಣ ಮಾಯವಾಗಿದೆ. ಈ ಘಟನೆ ಹನೂರು ತಾಲೂಕಿನ ಗೋಪಿಶೆಟ್ಟಿಯೂರು ಗ್ರಾಮದಲ್ಲಿ ನಡೆದಿದೆ.
ವ್ಯಕ್ತಿಗೆ ಪಂಗನಾಮ ಹಾಕಿದ ಖದೀಮರು: 4 ನಿಮಿಷದಲ್ಲಿ 1.80 ಲಕ್ಷ ರೂ ಖೋತಾ - fraud in chamarajanagara
ಆ್ಯಪ್ ಅಪ್ಡೇಟ್ ಮಾಡುವಂತೆ ಮೆಸೇಜ್ ಕಳುಹಿಸಿದ ಬಳಿಕ ವ್ಯಕ್ತಿಯಿಂದ ಒಟಿಪಿ ಪಡೆದು ಲಕ್ಷಾಂತರ ರೂಪಾಯಿ ವಂಚಿಸಿರುವ ಪ್ರಕರಣ ಚಾಮರಾಜನಗರದಲ್ಲಿ ನಡೆದಿದೆ.
ವ್ಯಕ್ತಿಗೆ ಪಂಗನಾಮ ಹಾಕಿದ ಖದೀಮರು
ಮೊಬೈಲ್ಗೆ ಬಂದ ಮೆಸೇಜ್ನ ಲಿಂಕ್ ಒತ್ತಿದ್ದೇ ತಡ ಒಟಿಪಿ ಕೇಳಿದೆ. ಬ್ಯಾಂಕಿನವರೆಂದು ಕರೆ ಮಾಡಿದ ವ್ಯಕ್ತಿಗೆ ಒಟಿಪಿ ಕೊಟ್ಟಿದ್ದಾರೆ. ಕೇವಲ 4 ನಿಮಿಷದ ಅವಧಿಯಲ್ಲಿ 24 ಸಾವಿರ, 50 ಸಾವಿರ, 99 ಸಾವಿರ, 10 ಸಾವಿರ ಹೀಗೆ ಬ್ಯಾಂಕ್ ಖಾತೆಯಲ್ಲಿದ್ದ ಹಣ ಕಡಿತಗೊಂಡಿದೆ. ಒಟ್ಟಾರೆ 1.83 ಸಾವಿರ ರೂಪಾಯಿ ವ್ಯಕ್ತಿ ಖಾತೆಯಿಂದ ಬೇರೆಯವರ ಅಕೌಂಟ್ಗೆ ವರ್ಗಾವಣೆಗೊಂಡಿದೆ. ಹಣ ಕಳೆದುಕೊಂಡವರು ಚಾಮರಾಜನಗರ ಸಿಇಎನ್ ಠಾಣೆಗೆ ದೂರು ಕೊಟ್ಟಿದ್ದಾರೆ.
ಇದನ್ನೂ ಓದಿ:ಹೆಲಿಕಾಪ್ಟರ್ ಸೇವೆ ಬಗ್ಗೆ ಗೂಗಲ್ನಲ್ಲಿ ಸರ್ಚ್: 38,060 ರೂ.ಕಳೆದುಕೊಂಡ ಟೆಕ್ಕಿ