ಕೊಳ್ಳೇಗಾಲ: ಲಾಕ್ಡೌನ್ ಪರಿಣಾಮ ಜನತೆಗೆ ಬೇಕಾದ ದಿನಸಿ ವಸ್ತುಗಳ ಖರೀದಿಗೆ ಜಿಲ್ಲಾಡಳಿತ ಸಮಯ ನಿಗದಿ ಮಾಡಿ ಅವಕಾಶ ನೀಡಿದೆ. ಆದರೆ, ಕೆಲವರು ಅಗತ್ಯ ವಸ್ತುಗಳನ್ನು ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಈ ದೂರನ್ನು ಆಧರಿಸಿ ತಾಲೂಕು ದಂಡಾಧಿಕಾರಿ ಕೆ.ಕುನಾಲ್ ದಿನಸಿ ಅವರು ಅಂಗಡಿಗಳ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ.
ದಿನಸಿ ಬೆಲೆ ಏರಿಕೆ ಆರೋಪ: ದಿಢೀರ್ ದಾಳಿ ನಡೆಸಿ ಎಚ್ಚರಿಕೆ ಕೊಟ್ಟ ತಹಶೀಲ್ದಾರ್ - corona virus phobia
ಅಂಗಡಿಗಳು, ಮಾರುಕಟ್ಟೆ ದರದಲ್ಲೆ ಮಾರಾಟ ಮಾಡಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಜರುಗಿಸಿ ಪರವಾನಗಿ ರದ್ದುಪಡಿಸಬೇಕಾಗುತ್ತದೆ ಎಂದು ತಹಶೀಲ್ದಾರ್ ಕೆ.ಕುನಾಲ್ ಅವರು ಎಚ್ಚರಿಕೆ ನೀಡಿದ್ದಾರೆ.
ತರಕಾರಿ, ದಿನಸಿ, ಹಾಲು ತುರ್ತು ಪರಿಸ್ಥಿತಿಯಲ್ಲಿ ಜನರಿಗೆ ಬೇಕಾದ ವಸ್ತುಗಳಾಗಿವೆ. ಕೊರೊನಾ ಭೀತಿಯಿಂದ ಜನ ಸಾಮಾನ್ಯರು ಕೆಲಸ ಕಾರ್ಯಕ್ಕೆ ಹೊಗದ ಕಾರಣ ಹಣದ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಿರುವಾಗ ಬೇಕಾದ ಅಗತ್ಯ ವಸ್ತುಗಳು ಕಡಿಮೆ ದರದಲ್ಲಿ ಸಿಕ್ಕರೆ ಅನುಕೂಲವಾಗುತ್ತದೆ ಎನ್ನುತ್ತಾರೆ ಜನ. ಹೀಗಾಗಿ ತಾಲೂಕು ಅಧಿಕಾರಿಗಳು ಅಂಗಡಿಗಳಿಗೆ ಭೇಟಿ ನೀಡಿ ನಿಗದಿತ ಬೆಲೆಗೆ ಮಾರಾಟ ಮಾಡುವಂತೆ ಸೂಚಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ತಹಶೀಲ್ದಾರ್ ಕೆ.ಕುನಾಲ್ ಅವರು, ಆಹಾರ ಪದಾರ್ಥಗಳನ್ನು ನಿಗದಿತ ಬೆಲೆಗಿಂತ ಅಧಿಕ ಬೆಲೆಗೆ ಖರೀದಿಗೆ ನೀಡಲಾಗುತ್ತಿದೆ ಎಂಬ ದೂರಿನ್ವಯ ದಾಳಿ ನಡೆಸಿದ್ದೇನೆ. ದಾಳಿಯಲ್ಲಿ ಹೆಚ್ಚಿನ ಬೆಲೆ ತೆಗೆದು ಕೊಳ್ಳುತ್ತಿರುವುದು ಕಂಡು ಬಂದಿಲ್ಲ. ಆದರೆ ಈ ದೂರು ಗಭೀರ ವಿಚಾರವಾಗಿದೆ ಎಂದರು.