ಚಾಮರಾಜನಗರ: ಸರ್ಕಾರಿ ಇಲಾಖೆಯ ಅಧಿಕಾರಿಗಳು ಚುನಾವಣಾ ಅಖಾಡಕ್ಕೆ ಧುಮುಕಲು ಎರಡೂವರೆ ವರ್ಷಕ್ಕೂ ಮೊದಲಿನಿಂದಲೇ ಸಾಕಷ್ಟು ಲಾಬಿ ನಡೆಸುತ್ತಿದ್ದಾರೆ ಎಂದು 'ಈಟಿವಿ ಭಾರತ'ಕ್ಕೆ ರಾಜಕೀಯ ಪಕ್ಷಗಳ ಮೂಲಗಳು ಖಚಿತಪಡಿಸಿವೆ.
ಚುನಾವಣಾ ಅಖಾಡಕ್ಕಿಳಿಯಲು ಸರ್ಕಾರಿ ಅಧಿಕಾರಿಗಳಲ್ಲಿ ಚಿಗುರಿದ ಕನಸು - ಚುನಾವಣಾ ಅಖಾಡಕ್ಕಿಳಿಯಲು ಸರ್ಕಾರಿ ಅಧಿಕಾರಿಗಳಲ್ಲಿ ಚಿಗುರಿದ ಕನಸು
ಚಾಮರಾಜನಗರ ಜಿಲ್ಲೆಯ ಉನ್ನತ ಅಧಿಕಾರಿ, ಪೊಲೀಸ್ ಇಲಾಖೆಯ ಇಬ್ಬರು ಅಧಿಕಾರಿಗಳು ಬಿಜೆಪಿ, ಕಾಂಗ್ರೆಸ್ ಹಾಗೂ ಬಿಎಸ್ಪಿಯಿಂದ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಪಡೆಯುವ ಕನಸನ್ನಿಟ್ಟುಕೊಂಡು ಸಚಿವರ ತನಕವೂ ಲಾಬಿ ನಡೆಸಿದ್ದಾರೆ ಎನ್ನುವ ಮಾಹಿತಿ 'ಈಟಿವಿ ಭಾರತ'ಕ್ಕೆ ಲಭಿಸಿದೆ.
ಜಿಲ್ಲೆಯ ಉನ್ನತ ಅಧಿಕಾರಿ, ಪೊಲೀಸ್ ಇಲಾಖೆಯ ಇಬ್ಬರು ಅಧಿಕಾರಿಗಳು ಬಿಜೆಪಿ, ಕಾಂಗ್ರೆಸ್ ಹಾಗೂ ಬಿಎಸ್ಪಿಯಿಂದ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಪಡೆಯುವ ಕನಸನ್ನಿಟ್ಟುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಸಚಿವರ ತನಕವೂ ಲಾಬಿ ನಡೆಸಿದ್ದಾರೆ ಎನ್ನುವ ಮಾಹಿತಿ ಇದೆ. ಸರ್ಕಾರಿ ಸೇವೆಯಲ್ಲಿರುವುದಿಂದ ಜನಮೆಚ್ಚುವ ಹಾಗೂ ಜನಪ್ರಿಯವಾಗುವ ಕೆಲಸಗಳಿಂದ ಗುರುತಿಸಿಕೊಳ್ಳಿ ಎಂದು ಪಕ್ಷದ ಪ್ರಮುಖರು ಸಲಹೆ ನೀಡಿದ್ದು, ಕೊಳ್ಳೇಗಾಲ ಕ್ಷೇತ್ರದಿಂದ ಸ್ಪರ್ಧಿಸಿ ವಿಧಾನಸೌಧ ಪ್ರವೇಶಿಸುವ ಆಸೆಯನ್ನು ಈ ಅಧಿಕಾರಿಗಳು ಹೊಂದಿದ್ದಾರೆ ಎಂದು ತಿಳಿದುಬಂದಿದೆ.
ಈಗಾಗಲೇ ನಿವೃತ್ತ ಐಎಫ್ಎಸ್ ಅಧಿಕಾರಿ ರಾಜು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಸುಭಾಷ್ ಭರಣಿ ಐಎಎಸ್ ಹುದ್ದೆ ತೊರೆದು ರಾಜಕೀಯ ಅಖಾಡಕ್ಕೆ ಧುಮಿಕಿದ್ದರು. ಮತ್ತೋರ್ವ ಐಎಎಸ್ ಅಧಿಕಾರಿ ಶಿವರಾಂ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಸರ್ಕಾರಿ ಹುದ್ದೆ ತೊರೆದು ಹಲವು ಪ್ರಯತ್ನಗಳ ಬಳಿಕ ಎನ್. ಮಹೇಶ್ ಕೊಳ್ಳೇಗಾಲ ಶಾಸಕರಾಗಿದ್ದಾರೆ. ಇವರ ಸಾಲಿಗೆ, ಮತ್ತಷ್ಟು ಅಧಿಕಾರಿಗಳು ಸೇರ್ಪಡೆಯಾಗುವುದು ಪಕ್ಕಾ ಎನ್ನುತ್ತಾರೆ ರಾಜಕೀಯ ಪಕ್ಷಗಳ ಮುಖಂಡರು.