ಕರ್ನಾಟಕ

karnataka

ETV Bharat / state

ಲಂಚಕ್ಕೆ ಬೇಡಿಕೆ: ಎಸಿಬಿ ಕಚೇರಿ ಸಮೀಪವೇ ಸಿಕ್ಕಿಬಿದ್ದ ಚಾಮರಾಜನಗರ ಎಸ್​​ಡಿಎ - ಎಸಿಬಿ ಬಲೆಗೆ ಬಿದ್ದ ದ್ವಿತೀಯ ದರ್ಜೆ ಸಹಾಯಕ

ಕಂಟ್ರಾಕ್ಟರ್ ಲೈಸೆನ್ಸ್ ಕೊಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಲೋಕೋಪಯೋಗಿ ಇಲಾಖೆ ದ್ವಿತೀಯ ದರ್ಜೆ ಸಹಾಯಕ ಗೋವಿಂದಯ್ಯ ಎಂಬುವವರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

Chamrajnagar SDA Caught By Acb
ದ್ವಿತೀಯ ದರ್ಜೆ ಸಹಾಯಕ ಗೋವಿಂದಯ್ಯ

By

Published : Jun 22, 2022, 8:50 AM IST

ಚಾಮರಾಜನಗರ: ಎಸಿಬಿ ಕಚೇರಿ ಆಸುಪಾಸಿನಲ್ಲೇ ಸರ್ಕಾರಿ ನೌಕರ ಲಂಚ ಪಡೆಯುವಾಗ ಸಿಕ್ಕಿಬಿದ್ದಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಲೋಕೋಪಯೋಗಿ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ಗೋವಿಂದಯ್ಯ ಎಸಿಬಿ ಬಲೆಗೆ ಬಿದ್ದ ನೌಕರ.

ಚಾಮರಾಜನಗರ ತಾಲೂಕಿನ ಅಟ್ಟಗುಳಿಪುರದ ವ್ಯಕ್ತಿಯೊಬ್ಬರಿಗೆ ಕ್ಲಾಸ್-4 ಕಾಂಟ್ರಾಕ್ಟರ್ ಕೊಡಲು 10 ಸಾವಿರ ರೂ. ಲಂಚ ಪಡೆದು ಮತ್ತೆ 7.5 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದಾರೆ ಎಂದು ವ್ಯಕ್ತಿಯೊಬ್ಬರು ದೂರು ಕೊಟ್ಟಿದ್ದರು. ಎಸಿಬಿ ಡಿವೈಎಸ್​ಪಿ ಸದಾನಂದ ತಿಪ್ಪಣ್ಣವರ್ ನೇತೃತ್ವದಲ್ಲಿ ನಿನ್ನೆ(ಮಂಗಳವಾರ) ಕಾರ್ಯಾಚರಣೆ ಕೈಗೊಂಡ ಅಧಿಕಾರಿಗಳು 7.5 ಸಾವಿರ ರೂ‌ ಲಂಚ ಪಡೆಯುವಾಗ ಗೋವಿಂದಯ್ಯ ಅವರನ್ನು ಬಂಧಿಸಿದ್ದಾರೆ.

ಪಿಡಬ್ಲ್ಯೂಡಿ ಕಚೇರಿ ಮತ್ತು ಎಸಿಬಿ ಕಚೇರಿ ಒಂದೇ ರಸ್ತೆಯಲ್ಲಿದ್ದು, ಕಚೇರಿ ಸಮೀಪದಲ್ಲೇ ಅಧಿಕಾರಿ ಸಿಕ್ಕಿ ಬಿದ್ದಿದ್ದಾರೆ. ಗೋವಿಂದಯ್ಯ ಅವರನ್ನು ಬಂಧಿಸಿರುವ ಎಸಿಬಿ ಅಧಿಕಾರಿಗಳು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ಇದನ್ನೂ ಓದಿ:50 ರೂಪಾಯಿಗಾಗಿ ಸ್ನೇಹಿತರ ನಡುವೆ ಜಗಳ.. ಬೆಂಗಳೂರಲ್ಲಿ ಚಾಕು ಇರಿದು ಗೆಳೆಯನ ಕೊಲೆ

For All Latest Updates

ABOUT THE AUTHOR

...view details