ಚಾಮರಾಜನಗರ:ಆಕಸ್ಮಿಕವಾಗಿ ಛಾವಣಿ ಮೇಲಿಂದ ಬಿದ್ದು ಕಾವಲುಗಾರ ಮೃತಪಟ್ಟಿರುವ ಘಟನೆ ನಗರದ ವಾಸವಿ ಮಹಲ್ ಛತ್ರದಲ್ಲಿ ನಡೆದಿದೆ.
ನಗರದ ಗಾಳಿಪುರ ನಿವಾಸಿ ಜವರಯ್ಯ(55) ಮೃತ ದುರ್ದೈವಿ.
ಚಾಮರಾಜನಗರ:ಆಕಸ್ಮಿಕವಾಗಿ ಛಾವಣಿ ಮೇಲಿಂದ ಬಿದ್ದು ಕಾವಲುಗಾರ ಮೃತಪಟ್ಟಿರುವ ಘಟನೆ ನಗರದ ವಾಸವಿ ಮಹಲ್ ಛತ್ರದಲ್ಲಿ ನಡೆದಿದೆ.
ನಗರದ ಗಾಳಿಪುರ ನಿವಾಸಿ ಜವರಯ್ಯ(55) ಮೃತ ದುರ್ದೈವಿ.
ಇವರು ಹಲವು ವರ್ಷಗಳಿಂದ ವಾಸವಿ ಮಹಲ್ನ ಕಾವಲುಗಾರನಾಗಿ ಕಾರ್ಯನಿರ್ವಹಿಸುತ್ತಿದ್ದರು. ಛತ್ರದ ಛಾವಣಿಯ ನವೀಕರಣ ಕಾರ್ಯ ನಡೆಯುತ್ತಿದ್ದು, ಪ್ಲಾಸ್ಟಿಕ್ ಶೀಟಿನ ಮೇಲೆ ಕಾಲಿಟ್ಟಿದ್ದರಿಂದ ಜಾರಿ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.