ನಶೆಲೋಕದ ಮಾಹಿತಿ ನೀಡಲು ಚಾಮರಾಜನಗರದಲ್ಲಿ ಆರಂಭವಾಯ್ತು ಸಹಾಯವಾಣಿ - ಚಾಮರಾಜನಗರ ಪೊಲೀಸರು ಡ್ರಗ್ಸ್ ನಿಯಂತ್ರಣ
ಪೊಲೀಸ್ ಕಂಟ್ರೋಲ್ ರೂಂನಲ್ಲಿ '1908' ಎಂಬ ಮಾದಕವಸ್ತು ನಿಯಂತ್ರಣ ಸಹಾಯವಾಣಿಗೆ ಚಾಲನೆ ನೀಡಿಲಾಗಿದೆ.
police helpline
ಚಾಮರಾಜನಗರ: ಮಾದಕವಸ್ತುಗಳ ವಿರುದ್ಧ ಅಭಿಯಾನ ಆರಂಭಿಸಿರುವ ಚಾಮರಾಜನಗರ ಪೊಲೀಸರು ಡ್ರಗ್ಸ್ ನಿಯಂತ್ರಣಕ್ಕಾಗಿ ಸಹಾಯವಾಣಿಯೊಂದನ್ನು ಆರಂಭಿಸಿದ್ದಾರೆ.
ಪೊಲೀಸ್ ಕಂಟ್ರೋಲ್ ರೂಂನಲ್ಲಿ '1908' ಎಂಬ ಮಾದಕವಸ್ತು ನಿಯಂತ್ರಣ ಸಹಾಯವಾಣಿಗೆ ಚಾಲನೆ ನೀಡಿದ್ದು, ಮಾದಕವಸ್ತುಗಳ ಕೃಷಿ , ತಯಾರಿಕೆ, ಸಂಗ್ರಹಣೆ, ಮಾರಾಟಕ್ಕೆ ಸಂಜು, ಸೇವನೆ, ನೆರವು ನೀಡುವುದರ ಮಾಹಿತಿ ಇದ್ದರೆ ಸಾರ್ವಜನಿಕರು 1908 ಕ್ಕೆ ಕರೆಮಾಡಿ ಪೊಲೀಸರಿಗೆ ತಿಳಿಸಬಹುದಾಗಿದೆ.