ಕರ್ನಾಟಕ

karnataka

ETV Bharat / state

ದಂಡದ ಬದಲು ಹೆಲ್ಮೆಟ್​​​​... ಚಾಮರಾಜನಗರ ಪೊಲೀಸರ ಮಾಸ್ಟರ್​​​ ಪ್ಲಾನ್​​​​! - chamrajnagar police has diceded to give helmet instead of fine

ಹೆಲ್ಮೆಟ್​ ಹಾಕದೆ ವಾಹನ ಚಾಲನೆ ಮಾಡುವ ಪ್ರಕರಣಗಳನ್ನು ತಹಬದಿಗೆ ತರುವ ಉದ್ದೇಶದಿಂದ ಚಾಮರಾಜನಗರ ಪೊಲೀಸರು ದಂಡದ ಬದಲಿಗೆ ಸವಾರರಿಗೆ ಹೆಲ್ಮೆಟ್​​ ನೀಡುವ ಹೊಸ ಪ್ಲಾನ್​ ರೂಪಿಸಿದ್ದಾರೆ.

police
ದಂಡದ ಹಣದ ಬದಲು ಹೆಲ್ಮೆಟ್

By

Published : Dec 10, 2019, 3:04 PM IST

ಚಾಮರಾಜನಗರ:ದಂಡ ಹೆಚ್ಚಾದರೂ ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡುವವರು ತಹಬದಿಗೆ ಬರದ ಹಿನ್ನೆಲೆ ದಂಡದ ಹಣಕ್ಕೆ ಬದಲು ಸ್ಥಳದಲ್ಲೇ ಹೆಲ್ಮೆಟ್ ನೀಡಲು ಚಾಮರಾಜನಗರ ಪೊಲೀಸರು ನಿರ್ಧರಿಸಿದ್ದಾರೆ.

ಸುಮಾರು1500 ರೂ. ಬೆಲೆಬಾಳುವ ISI ಮಾರ್ಕಿನ ಹೆಲ್ಮೆಟ್​​​ಗಳನ್ನು ರಿಯಾಯಿತಿ ದರದಲ್ಲಿ 750 ರೂ.ಗೆ ಸವಾರರಿಗೆ ನೀಡುವ ಕಾರ್ಯಕ್ಕೆ ಇಂದು ಜಿಲ್ಲಾ ಎಸ್ಪಿ ಹೆಚ್.ಡಿ.ಆನಂದಕುಮಾರ್ ಚಾಲನೆ ನೀಡಿದ್ದಾರೆ.

ದಂಡದ ಹಣದ ಬದಲು ಹೆಲ್ಮೆಟ್

2017 ಮತ್ತು 2018ರಲ್ಲಿ 162 ಮಂದಿ ಹೆಲ್ಮೆಟ್ ಧರಿಸದೇ ಅಪಘಾತದಲ್ಲಿ ಮೃತಪಟ್ಟಿದ್ದು, ಈ ವರ್ಷ 142 ಮಂದಿ ಮೃತಪಟ್ಟಿದ್ದಾರೆ‌. 2019ರಲ್ಲಿ ಇಲ್ಲಿಯವರೆಗೆ 1.69 ಕೋಟಿ ರೂ. ದಂಡದ ಹಣ ಸಂಗ್ರಹಿಸಿದ್ದರೂ ಗ್ರಾಮೀಣ ಭಾಗದಲ್ಲಿ, ಕೊಳ್ಳೇಗಾಲ ಹಾಗೂ ಗುಂಡ್ಲುಪೇಟೆಯಲ್ಲಿ ಇಂದಿಗೂ ಕಡ್ಡಾಯ ಹೆಲ್ಮೆಟ್ ನಿಯಮ ಪಾಲನೆಯಾಗದಿರುವುದರಿಂದ ರೋಸಿ ಹೋಗಿರುವ ಪೊಲೀಸರು ದಂಡ ಹಾಕುವುದರೊಂದಿಗೆ ರಿಯಾಯಿತಿ ದರದಲ್ಲಿ ಹೆಲ್ಮೆಟ್ ನೀಡಲು ಮುಂದಾಗಿದ್ದಾರೆ.

ಪೊಲೀಸ್ ಕ್ಯಾಂಟೀನ್​​​ನಲ್ಲಿ ಪ್ರಾರಂಭದಲ್ಲಿ 500 ಹೆಲ್ಮೆಟ್​​ಗಳನ್ನು ತರಿಸಿದ್ದು, ಈ ಯೋಜನೆ ಫಲಪ್ರದವಾದರೆ ಇದನ್ನು ಇಲಾಖೆ ಮುಂದುವರೆಸಲಿದೆ. ದಂಡದ ಹಣದ ಬದಲಿಗೆ ಹೆಲ್ಮೆಟ್ ನೀಡುವ ಯೋಜನೆ ಚಾಮರಾಜನಗರ, ಕೊಳ್ಳೇಗಾಲ ಹಾಗೂ ಗುಂಡ್ಲುಪೇಟೆಯಲ್ಲಿ ಪ್ರಾರಂಭಿಕವಾಗಿ ಇಂದಿನಿಂದ ಹೆಲ್ಮೆಟ್​​​ ನೀಡಲಾಗುತ್ತಿದೆ.

ABOUT THE AUTHOR

...view details