ಚಾಮರಾಜನಗರ:ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಸಮರ್ಪಕವಾಗಿ ಜಿಲ್ಲೆಗೆ ಸರಬರಾಜು ಆಗದ ಹಿನ್ನೆಲೆಯಲ್ಲಿ ಕೊರತೆ ಕಾಣಿಸಿಕೊಂಡಿದೆ ಎಂದು ಈಟಿವಿ ಭಾರತಕ್ಕೆ ಉನ್ನತ ಮೂಲಗಳು ತಿಳಿಸಿವೆ.
ದೇಶದಲ್ಲಿ ಈಗಾಗಲೇ ನೀಡಲಾಗುತ್ತಿತುವ ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆಗಳಲ್ಲಿ ಕೋವಿಶೀಲ್ಡ್ ಮಾತ್ರ ಜಿಲ್ಲೆಗೆ ಪೂರಕವಾಗಿ ಸರಬರಾಜಾಗುತ್ತಿದ್ದು ಕೊವ್ಯಾಕ್ಸಿನ್ ಅಲಭ್ಯತೆಯ ಸಮಸ್ಯೆ ತಲೆದೋರಿದೆ.
ಜಿಲ್ಲೆಯಲ್ಲಿ ಈಗಾಗಲೇ 1,46,526 ಮಂದಿಗೆ ಲಸಿಕೆ ವಿತರಿಸಲಾಗಿದ್ದು ಇವರಲ್ಲಿ 1,20,264 ರಷ್ಟು ಮಂದಿಗೆ ಕೋವಿಶೀಲ್ಡ್ ನೀಡಿದ್ದು, 24,260 ಮಂದಿಗೆ ಕೊವ್ಯಾಕ್ಸಿನ್ ವಿತರಿಸಲಾಗಿದೆ. ಆದರೆ, ಕೆಲದಿನಗಳಿಂದ ಕೊವ್ಯಾಕ್ಸಿನ್ ಪೂರೈಕೆಯೇ ಆಗದಿರುವುದರಿಂದ ಸಾವಿರಾರು ಮಂದಿಗೆ ಇನ್ನೂ ಎರಡನೇ ಡೋಸ್ ಕೊಟ್ಟಿಲ್ಲ ಎಂದು ಹೆಸರು ಹೇಳಲಿಚ್ಛಿಸಿದ ವೈದ್ಯರೊಬ್ಬರು ಈಟಿವಿ ಭಾರತಕ್ಕೆ ಸ್ಪಷ್ಟಪಡಿಸಿದ್ದಾರೆ.