ಕರ್ನಾಟಕ

karnataka

ETV Bharat / state

ಚಾಮರಾಜನಗರದಲ್ಲಿಂದು 130 ಕೋವಿಡ್ ಕೇಸ್​​ ಪತ್ತೆ: ಮುಂದುವರೆದ ಸಾವಿನ ಸರಣಿ - ಚಾಮರಾಜನಗರದಲ್ಲಿ 130 ಕೋವಿಡ್ ಕೇಸ್

ಚಾಮರಾಜನಗರ ತಾಲೂಕಿನ ಹೆಬ್ಬಸೂರು ಗ್ರಾಮದ 43 ವರ್ಷದ ವ್ಯಕ್ತಿಯೊಬ್ಬರು 15ರಂದು ಸೋಂಕು ತಗಲಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ 16ರಂದು ಮೃತಪಟ್ಟಿದ್ದಾರೆ‌.

Chamrajnagar
Chamrajnagar

By

Published : Apr 17, 2021, 8:49 PM IST

ಚಾಮರಾಜನಗರ: ಜಿಲ್ಲೆಯಲ್ಲಿ ಕೊರೊನಾ ಏರುಗತಿ ಕಾಣುತ್ತಿದ್ದು, ಬರೋಬ್ಬರಿ ಇಂದು 130 ಹೊಸ ಕೋವಿಡ್ ಕೇಸ್ ಪತ್ತೆಯಾಗುವ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 451ಕ್ಕೆ ಏರಿಕೆಯಾಗಿದೆ. ಸಾವಿನ ಸರಣಿಯೂ ಮುಂದುವರೆದಿದೆ‌.

ಚಾಮರಾಜನಗರ ತಾಲೂಕಿನ ಹೆಬ್ಬಸೂರು ಗ್ರಾಮದ 43 ವರ್ಷದ ವ್ಯಕ್ತಿಯೊಬ್ಬರು 15ರಂದು ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ 16ರಂದು ಮೃತಪಟ್ಟಿದ್ದಾರೆ‌. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಕೋವಿಡ್​​ನಿಂದ 117 ಮಂದಿ ಅಸುನೀಗಿದ್ದಾರೆ.

ಇನ್ನು, 23 ಮಂದಿ ಗುಣಮುಖರಾಗಿದ್ದಾರೆ. 15 ಮಂದಿ ಐಸಿಯುನಲ್ಲಿದ್ದು, 244 ಮಂದಿ ಹೋಂ ಐಸೋಲೇಷನ್​​ನಲ್ಲಿದ್ದಾರೆ. 1690 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದ್ದು, 4243 ಮಂದಿಗೆ ಲಸಿಕೆ ನೀಡಲಾಗಿದೆ‌.

ABOUT THE AUTHOR

...view details