ಚಾಮರಾಜನಗರ:ದೆಹಲಿಯ ಕೆಂಪು ಕೋಟೆಗೆ ಲಗ್ಗೆ ಹಾಕಿದವರು ರೈತರಲ್ಲ, ಭಯೋತ್ಪಾದಕರು ಎಂಬ ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿಕೆ ಖಂಡಿಸಿ ನಗರದಲ್ಲಿ ರೈತ ಸಂಘದವರು ಪ್ರತಿಭಟಿಸಿದರು.
ಸಚಿವ ಬಿ ಸಿ ಪಾಟೀಲ್ ಪ್ರತಿಕೃತಿ ದಹಿಸಿ ರೈತರ ಪ್ರತಿಭಟನೆ ರೈತಸಂಘದ ಮುಖಂಡ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದ ರೈತರು, ಬಿ ಸಿ ಪಾಟೀಲ್ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದ್ರು. ಕೃಷಿ ಸಚಿವ ಪಾಟೀಲ್ ಪ್ರತಿಕೃತಿ ದಹಿಸಿ ಸಚಿವರ ಹೇಳಿಕೆಯನ್ನು ಖಂಡಿಸಿದರು.
ರೈತರು ಬೆಳೆಯುವ ಅನ್ನವನ್ನು ಕೃಷಿ ಸಚಿವರು ತಿಂದಿದ್ದರೇ ಈ ರೀತಿ ಮಾತನಾಡುತ್ತಿರಲಿಲ್ಲ. ಕೂಡಲೇ, ಅವರು ರೈತರ ಕ್ಷಮೆಯಾಚಿಸಿ ಕೃಷಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಕೃಷಿ ಬಗ್ಗೆ ಏನು ಅರಿವಿಲ್ಲದೆ, ತಲೆ ಕೆಟ್ಟಿರುವಂತೆ ಮಾತನಾಡಿದ್ದಾರೆ ಅಂತಾ ಪ್ರತಿಭಟನಾಕಾರರು ಕಿಡಿಕಾರಿದರು. ಇನ್ನೊಮ್ಮೆ ಚಾಮರಾಜನಗರಕ್ಕೆ ಕೃಷಿ ಸಚಿವರು ಬಂದರೇ ಕಪ್ಪು ಬಾವುಟ ಪ್ರದರ್ಶಿಸಿ ಮೊಟ್ಟೆ ಹೊಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಇದಕ್ಕೂ ಮುನ್ನ, ಪ್ರತಿಕೃತಿ ದಹನ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆಯಿತು.
ಇದನ್ನೂ ಓದಿ:ಎದೆ ನೋವು: ಮತ್ತೆ ಆಸ್ಪತ್ರೆಗೆ ದಾಖಲಾದ ಬಿಸಿಸಿಐ ಅಧ್ಯಕ್ಷ ಗಂಗೂಲಿ