ಚಾಮರಾಜನಗರ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್ಪಿ ನೇತೃತ್ವದಲ್ಲಿ 5 ತಂಡಗಳು ದಾಳಿ ನಡೆಸಿ ಅಕ್ಸಿಜನ್ ದುರಂತಕ್ಕೆ ಸಂಬಂಧಿಸಿದಂತೆ ಪ್ರಮುಖ ದಾಖಲೆಗಳನ್ನು, ಆಕ್ಸಿಜನ್ ವಿಲೇವಾರಿಗೆ ಸಂಬಂಧಿಸಿದ ಕಡತಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪೊಲೀಸರಿಂದ ಪ್ರಮುಖ ಕಡತಗಳು ಜಪ್ತಿ.. ದಾಳಿ ವೇಳೆ ಕುಸಿದುಬಿದ್ದ ಚಾಮರಾಜನಗರ ಡಿಎಚ್ಒ - ಚಾಮರಾಜನಗರ ಡಿವೈಎಸ್ಪಿ ಪ್ರಿಯದರ್ಶಿನಿ
ಚಾಮರಾಜನಗರ ಜಿಲ್ಲಾಸ್ಪತ್ರೆಯ ದುರಂತಕ್ಕೆ ಸಂಬಂಧಿಸಿದಂತೆ ಡಿವೈಎಸ್ಪಿ ಪ್ರಿಯದರ್ಶಿನಿ, ಕೊಳ್ಳೇಗಾಲ ಡಿವೈಎಸ್ಪಿ ನಾಗರಾಜ್, ಡಿಸಿಆರ್ ಬಿಯ ಅನ್ಸರ್ ಆಲಿ, ಮಹಿಳಾ ಠಾಣೆ ಪಿಐ ಪುಟ್ಟಸ್ವಾಮಿ, ಚಾಮರಾಜನಗರ ಪಿಐ ತಂಡಗಳು 3 ತಾಸಿಗೂ ಹೆಚ್ಚು ಕಾಲ ಆಕ್ಸಿಜನ್ ಗೆ ಸಂಬಂಧಿಸಿದ ಸಂಪೂರ್ಣ ಲೆಕ್ಕಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಜಿಲ್ಲಾ ಆರೋಗ್ಯಾಧಿಕಾರಿ ಕುಸಿದು ಬಿದ್ದಿದ್ದಾರೆ.
![ಪೊಲೀಸರಿಂದ ಪ್ರಮುಖ ಕಡತಗಳು ಜಪ್ತಿ.. ದಾಳಿ ವೇಳೆ ಕುಸಿದುಬಿದ್ದ ಚಾಮರಾಜನಗರ ಡಿಎಚ್ಒ Chamrajnagar](https://etvbharatimages.akamaized.net/etvbharat/prod-images/768-512-08:36:56:1620227216-kn-cnr-09-dho-av-ka10038-05052021195115-0505f-1620224475-578.jpg)
ಚಾಮರಾಜನಗರ ಡಿವೈಎಸ್ಪಿ ಪ್ರಿಯದರ್ಶಿನಿ, ಕೊಳ್ಳೇಗಾಲ ಡಿವೈಎಸ್ಪಿ ನಾಗರಾಜ್, ಡಿಸಿಆರ್ ಬಿಯ ಅನ್ಸರ್ ಆಲಿ, ಮಹಿಳಾ ಠಾಣೆ ಪಿಐ ಪುಟ್ಟಸ್ವಾಮಿ, ಚಾಮರಾಜನಗರ ಪಿಐ ತಂಡಗಳು 3 ತಾಸಿಗೂ ಹೆಚ್ಚು ಕಾಲ ಆಕ್ಸಿಜನ್ ಗೆ ಸಂಬಂಧಿಸಿದ ಸಂಪೂರ್ಣ ಲೆಕ್ಕಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ದಾಳಿ ಬೆನ್ನಲ್ಲೇ ಡಿಎಚ್ಒ ರವಿ ಅವರು ಪೊಲೀಸರ ಮುಂದೆಯೇ ಕುಸಿದಬಿದ್ದ ಘಟನೆ ಆರೋಗ್ಯ ಇಲಾಖೆ ಸಭಾಂಗಣದಲ್ಲಿ ನಡೆದಿದೆ. ಅಲ್ಲೇ ಇದ್ದ ಸಹೋದ್ಯೋಗಿಗಳು ನೀರು ಕೊಟ್ಟು ಆರೈಕೆ ಮಾಡಿದ್ದಾರೆ. ಸದ್ಯ, ಆಕ್ಸಿಜನ್ ದುರಂತಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೆ ಆದೇಶಿಸಿರುವುದರಿಂದ ನಾಳೆ(ಗುರುವಾರ) ತನಿಖಾಧಿಕಾರಿಗಳು ಜಿಲ್ಲೆಗೆ ಭೇಟಿ ನೀಡುವ ಸಾಧ್ಯತೆ ಇದೆ.