ಕರ್ನಾಟಕ

karnataka

ETV Bharat / state

ಸಾಲು ಸಾಲು ರಜೆ.. ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರವಾಸಿಗರ ದಂಡು - ಬಂಡೀಪುರ ರಾಷ್ಟ್ರೀಯ ಉದ್ಯಾನವನ

ಕೊರೊನಾ ನಿಯಮ ಪಾಲಿಸಿ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಗೋಪಾಲಸ್ವಾಮಿ ಬೆಟ್ಟಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಆದಾಯವೂ ಬರುತ್ತಿದ್ದು, ಸ್ಥಳೀಯರ ಮೊಗದಲ್ಲಿ ಮಂದಹಾಸ ಮೂಡಿದೆ.

Tourists visit Bandipur
ಪ್ರವಾಸಿಗರು

By

Published : Oct 28, 2020, 3:29 PM IST

ಗುಂಡ್ಲುಪೇಟೆ (ಚಾಮರಾಜನಗರ): ದಸರಾ ರಜೆಗಳು ಇರುವುದರಿಂದ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಸಫಾರಿಗೆ ಹೆಚ್ಚೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದಾರೆ.

ಕೊರೊನಾ ಆತಂಕದಿಂದ ಸಫಾರಿಗೆ ಹೆಚ್ಚು ಜನರು ಆಗಮಿಸುತ್ತಿರಲಿಲ್ಲ. ಇದರಿಂದಾಗಿ ಕಳೆದ ಆರೇಳು ತಿಂಗಳಿನಿಂದ ಆದಾಯದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿತ್ತು. ಈ ದಸರಾ ಸಂದರ್ಭದಲ್ಲಿ ಸಾಲು ರಜೆ ಇರುವ ಕಾರಣದಿಂದ ಪ್ರವಾಸಿಗರು ಕೊರೊನಾ ಲೆಕ್ಕಿಸದೆ ಜಿಲ್ಲೆಯ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಕಳೆದ ಮೂರು ದಿನಗಳಲ್ಲಿ ಸುಮಾರು 1,500 ಕ್ಕೂ ಹೆಚ್ಚು ಪ್ರವಾಸಿಗರು ಆಗಮಿಸಿದ್ದು, ಸುಮಾರು 8 ಲಕ್ಷದವರೆಗೆ ಆದಾಯ ಬಂದಿದೆ ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು. ಸಫಾರಿಗೆ ಹೆಚ್ಚು ಪ್ರವಾಸಿಗರು ಬರುತ್ತಿರುವ ಹಿನ್ನೆಲೆ ಸುತ್ತಮುತ್ತಲಿನ ಖಾಸಗಿ ಹೋಟೆಲ್, ರೆಸಾರ್ಟ್ ಗಳ ವ್ಯವಹಾರ ಗರಿಗೆದರಿದೆ. ರಸ್ತೆ ಬದಿಯ ವ್ಯಾಪಾರಿಗಳಿಗೂ ಉತ್ತಮ ರೀತಿಯಲ್ಲಿ ವ್ಯಾಪಾರ-ವಹಿವಾಟು ಆಗುತ್ತಿದೆ.

ಸಫಾರಿಗೆ ಬರುತ್ತಿರುವ ಪ್ರವಾಸಿಗರು

ಗೋಪಾಲಸ್ವಾಮಿ ಬೆಟ್ಟದಲ್ಲೂ ಜನ ಜಂಗುಳಿ:

ಕಳೆದ ಮೂರ್ನಾಲ್ಕು ದಿನಗಳಿಂದ ಪ್ರಸಿದ್ಧ ಗೋಪಾಲಸ್ವಾಮಿ ಬೆಟ್ಟಕ್ಕೆ ಬರುತ್ತಿರುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಎಂದಿನಂತೆ ದೇವಸ್ಥಾನಕ್ಕೆ ಬಸ್ ವ್ಯವಸ್ಥೆ ಇದ್ದರೂ, ಹೆಚ್ಚು ಜನರು ಆಗಮಿಸುತ್ತಿರುವ ಕಾರಣ ಸಂಚಾರದಲ್ಲಿ ವ್ಯತ್ಯಯವಾಯಿತು.

ಕಳೆದ ಆರೇಳು ತಿಂಗಳಿನಿಂದ ಕೊರೊನಾ ಭಯದಿಂದ ದೇವಸ್ಥಾನಕ್ಕೆ ಬರುವ ಜನರು ಕಡಿಮೆಯಾಗಿದ್ದರು. ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿರುವ ಕಾರಣ ಭಕ್ತರು, ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ದೇವಸ್ಥಾನಗಳಿಗೆ ಬರುತ್ತಿದ್ದಾರೆ ಎಂದು ದೇವಸ್ಥಾನದ ಪ್ರಧಾನ ಆರ್ಚಕ ಗೋಪಾಲಕೃಷ್ಣ ಭಟ್ಟರು ತಿಳಿಸಿದರು.

ಹಬ್ಬಗಳ ಹಿನ್ನೆಲೆ ಈ ವಾರ ಹೆಚ್ಚು ರಜೆಗಳು ಇರುವುದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ವಿಜಯದಶಮಿಯ ದಿನದಂದೇ ಸುಮಾರು ಎರಡು ಲಕ್ಷ ರೂಪಾಯಿವರೆಗೆ ಆದಾಯ ಬಂದಿತ್ತು ಎಂದು ವಲಯ ಅರಣ್ಯಾಧಿಕಾರಿ ನವೀನ್ ಕುಮಾರ್ ಮಾಹಿತಿ ನೀಡಿದರು.

ABOUT THE AUTHOR

...view details