ಕರ್ನಾಟಕ

karnataka

ETV Bharat / state

ಚಾಮರಾಜನಗರದಾದ್ಯಂತ ವರುಣನ ಅಬ್ಬರ: ಹೈರಾಣದ ಜನ - ವರುಣ ಅಬ್ಬರ

ಚಾಮರಾಜನಗರದಲ್ಲಿಯೂ ವರುಣ ತನ್ನ ರೌದ್ರಾವತಾರ ಮುಂದುವರೆಸಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಸಾರ್ವಜನಿಕ ಸ್ಥಳಗಳು ನಿಶಬ್ಧವಾಗಿವೆ. ಕಾವೇರಿ ನದಿ ಪಾತ್ರದ ಗ್ರಾಮಗಳು ಪ್ರವಾಹದ ಭೀತಿ ಎದುರಿಸುತ್ತಿವೆ.

ಮಳೆಯಲ್ಲಿ ಶಾಲೆಗಳಿಗೆ ಹೊರಟ ವಿದ್ಯಾರ್ಥಿಗಳು

By

Published : Aug 8, 2019, 12:22 PM IST

Updated : Aug 8, 2019, 1:14 PM IST

ಚಾಮರಾಜನಗರ:ಜಿಲ್ಲಾದ್ಯಂತ ಎರಡು ದಿನಗಳಿಂದ ವರುಣ ಬಿಡದೆ ಸುರಿಯುತ್ತಿದ್ದು, ನಿಲ್ಲದ ಮಳೆಯಿಂದ ಜನರು ಹೈರಣಾಗಿದ್ದಾರೆ.

ಮಳೆಯಲ್ಲಿ ಶಾಲೆಗಳಿಗೆ ಹೊರಟ ವಿದ್ಯಾರ್ಥಿಗಳು

ಬುಧವಾರ ತುಂತುರು ಮಳೆ ಎಡಬಿಡದೇ ಸುರಿದಿತ್ತು. ಆದರೆ, ಗುರುವಾರ ಜಿಲ್ಲೆಯ ಬಹುಪಾಲು ಭಾಗದಲ್ಲಿ ಜೋರು ಮಳೆಯೇ ಪ್ರಾರಂಭವಾಗಿದೆ. ಸಾರ್ವಜನಿಕ ಸ್ಥಳಗಳಾದ ಬಸ್​ ನಿಲ್ದಾಣ, ಮಾರುಕಟ್ಟೆ ಇತರೆ ವ್ಯಾಪಾರ-ವಹಿವಾಟುಗಳು ಸ್ತಬ್ಧಗೊಂಡಿವೆ. ಯಾರೂ ಮನೆಯಿಂದ ಹೊರ ಬರದ ಸ್ಥಿತಿ ನಿರ್ಮಾಣವಾಗಿದೆ.

ಚಾಮರಾಜನಗರ, ಯಳಂದೂರು, ಗುಂಡ್ಲುಪೇಟೆ, ಸಂತೇಮರಹಳ್ಳಿ, ಕೊಳ್ಳೇಗಾಲ, ಹನೂರು ಭಾಗದಲ್ಲಿ ಮಳೆ ಹೆಚ್ಚಾಗಿದೆ. ಗುಂಡ್ಲುಪೇಟೆ ತಾಲೂಕಿನ ಚಿಕ್ಕಾಟಿ ಗ್ರಾಮದ ಶಿವಕುಮಾರ್ ಎಂಬುವವರ ಮನೆ ಕುಸಿದಿದೆ. ನಗರದ ಜೆಎಸ್​ಎಸ್ ಕಾಲೇಜಿನ ಗೇಟ್ ಮುಂಭಾಗದ ಗುಲ್ ಮೊಹರ್ ಮರ ಕಾರೊಂದರ ಮೇಲೆ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಪ್ರಾಣ ಹಾನಿ ಸಂಭವಿಸಿಲ್ಲ. ಕಬಿನಿ ಜಲಾಶಯದಿಂದ ಹೆಚ್ಚಿನ ನೀರು ಬಿಟ್ಟರೆ ಕೊಳ್ಳೇಗಾಲದ ಕಾವೇರಿ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಲಿದೆ.

Last Updated : Aug 8, 2019, 1:14 PM IST

ABOUT THE AUTHOR

...view details