ಕರ್ನಾಟಕ

karnataka

ETV Bharat / state

ಇಷ್ಟಲಿಂಗ ಪೂಜೆ ಕರೆಗೆ ಚಾಮರಾಜನಗರ ಜಿಲ್ಲಾದ್ಯಂತ ಉತ್ತಮ ಪ್ರತಿಕ್ರಿಯೆ - ಅಖಿಲ ಭಾರತ ವೀರಶೈವ ಮಹಾಸಭಾ

ಅಖಿಲ ಭಾರತ ವೀರಶೈವ ಮಹಾಸಭಾ ಕರೆಗೆ ಓಗೊಟ್ಟು ಜಿಲ್ಲೆಯ ವಿವಿಧ ಕಡೆಗಳಲ್ಲಿ ಜನರು ಇಷ್ಟಲಿಂಗ ಪೂಜೆಗೆ ಮಾಡಿದ್ದಾರೆ.

ishtalinga pooja
ಇಷ್ಟಲಿಂಗ ಪೂಜೆ

By

Published : Apr 14, 2020, 8:04 AM IST

ಚಾಮರಾಜನಗರ: ಕೊರೊನಾ ಮುಕ್ತಿಗಾಗಿ ವೀರಶೈವ ಲಿಂಗಾಯತ ಸಭಾ ಕರೆ ನೀಡಿದ್ದ ಇಷ್ಟಲಿಂಗ ಪೂಜೆಗೆ ಜಿಲ್ಲಾದ್ಯಂತ ಉತ್ತಮ‌ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಅಖಿಲ ಭಾರತ ವೀರಶೈವ ಮಹಾಸಭಾ ಕರೆಗೆ ಓಗೊಟ್ಟು ಜಿಲ್ಲೆಯ ವಿವಿಧ ಮಠಗಳ ಮಾಠಾಧೀಶರು, ಶ್ರೀಸಾಮಾನ್ಯರು ಇಷ್ಟಲಿಂಗ ಪೂಜೆ ನೆರವೇರಿಸಿ ಕೊರೊನಾ ಆದಷ್ಟು ಬೇಗ ದೇಶದಿಂದ ತೊಲಗಲಿ ಎಂದು ಲಿಂಗಾಯತ ಸಮಾಜ ಸೇರಿದಂತೆ ಲಿಂಗಧಾರಣೆ ಮಾಡಿದ್ದ ಇತರೆ ಸಮುದಾಯದ ಜನರು ಪ್ರಾರ್ಥಿಸಿದರು.

ಶಿವ ಮಂತ್ರ ಜಪದ ಮೂಲಕ ಮನೆಮನೆಗಳಲ್ಲಿ ಸಾಮೂಹಿಕವಾಗಿ ಮಹಿಳೆಯರು, ಮಕ್ಕಳು, ಹಿರಿಯರು ಇಷ್ಟಲಿಂಗ ಪೂಜೆ ನೆರವೇರಿಸಿ ಕೊರೊನಾ ವಿರುದ್ಧ ಆಧ್ಯಾತ್ಮಿಕ ದಾರಿಯನ್ನು ತುಳಿದರು.

ABOUT THE AUTHOR

...view details