ಕರ್ನಾಟಕ

karnataka

ETV Bharat / state

ಚಾಮರಾಜನಗರದ ಜನಮನ ಗೆದ್ದಿದ್ದರು ಹಿಂದಿನ ಲತಾಕುಮಾರಿ ವರ್ಗಾವಣೆ.. ನೂತನ CEO ಆಗಿ ನಾರಾಯಣರಾವ್ ಅಧಿಕಾರ ಸ್ವೀಕಾರ.. - ನೂತನ CEO

ಕೆ ಎಸ್ ಲತಾಕುಮಾರಿ ಅವರನ್ನು ರೇರಾಗೆ ವರ್ಗಾವಣೆ ಮಾಡಿ ಹಾವೇರಿ ಎಸಿಯಾಗಿದ್ದ ನಾರಾಯಣರಾವ್ ಅವರನ್ನು ಚಾಮರಾಜನಗರ ಜಿಪಂ ಸಿಇಒ ಆಗಿ ನೇಮಿಸಿ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.

ಚಾಮರಾಜನಗರ

By

Published : Sep 8, 2019, 10:14 AM IST

ಚಾಮರಾಜನಗರ: ಜಿಪಂ ನೂತನ ಸಿಇಒ ಬಿ ಹೆಚ್ ನಾರಾಯಣರಾವ್ ಇಂದು ಅಧಿಕಾರ ಸ್ವೀಕರಿಸಿ ಅಧಿಕಾರಿಗಳ ಸಭೆ ನಡೆಸಿದ್ದಾರೆ.

ಕೆ ಎಸ್ ಲತಾಕುಮಾರಿ ಅವರನ್ನು ರೇರಾಗೆ ವರ್ಗಾವಣೆ ಮಾಡಿ ಹಾವೇರಿ ಎಸಿಯಾಗಿದ್ದ ನಾರಾಯಣರಾವ್ ಅವರನ್ನು ಚಾಮರಾಜನಗರ ಜಿಪಂ ಸಿಇಒ ಆಗಿ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿತ್ತು. ಇಂದು ನೂತನ ಸಿಇಒ ಆಗಿ ನಾರಾಯಣರಾವ್‌ ಅಧಿಕಾರ ಸ್ವೀಕರಿಸಿ, ಜಿಲ್ಲೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.

ಜನಮನ ಗೆದ್ದಿದ್ದ ಲತಾಕುಮಾರಿ:

ರೇರಾದಿಂದ ವರ್ಗಾವಣೆಯಾಗಿ ಬಂದಿದ್ದ ಕೆ ಎಸ್ ಲತಾಕುಮಾರಿ 6 ತಿಂಗಳ ಅವಧಿಯಲ್ಲೇ ಜನಮನ ಗೆದ್ದಿದ್ದರು. ಹಾಡಿ ಶಾಲೆಗಳು, ಗಿರಿಜನ ಪೋಡುಗಳು,ಗ್ರಾಪಂ ಕಚೇರಿಗಳಿಗೆ ದಿಢೀರ್ ಭೇಟಿ ನೀಡುವ ಮೂಲಕ ಅಧಿಕಾರಿಗಳ ಚಳಿ ಬಿಡಿಸಿದ್ದರು. ನಲ್ಲಿಕತ್ರಿ ಎಂಬ ಕುಗ್ರಾಮಕ್ಕೆ ಅಂಗನವಾಡಿ, ಮತದಾನ ಹೆಚ್ಚಳಕ್ಕೆ ವಿನೂತನ ಕಾರ್ಯಕ್ರಮಗಳನ್ನು ನಡೆಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಚಾಮರಾಜನಗರ ಎಂಬುದು ಹಿಂದುಳಿದ ಜಿಲ್ಲೆಯಲ್,ಲ ಸುಂದರವಾದ ಜಿಲ್ಲೆ. ಈ 6 ತಿಂಗಳಲ್ಲಿ ಯಾವ ರಾಜಕೀಯ ಒತ್ತಡವೂ ಇಲ್ಲದೇ ಕಾರ್ಯ ನಿರ್ವಹಿಸಿದ್ದೇನೆ, ಚಾಮರಾಜನಗರದಲ್ಲಿನ ಕೆಲಸ ಹೊಸ ಅನುಭವ ನೀಡಿದೆ ಎಂದು ನಿರ್ಗಮಿತ ಸಿಇಒ ಕೆ ಎಸ್ ಲತಾಕುಮಾರಿ ತಿಳಿಸಿದರು.

ABOUT THE AUTHOR

...view details