ಕರ್ನಾಟಕ

karnataka

ETV Bharat / state

ಶಾಲಾ ಕಾಲೇಜು ಆರಂಭಕ್ಕೆ ಚಾಮರಾಜನಗರದಲ್ಲಿ ಸಕಲ ಸಿದ್ಧತೆ: ಜಿಪಂ ಸಿಇಒ ಭೋಯರ್ - ಶಾಲೆ ಪುನರಾರಂಭದ ಬಗ್ಗೆ ಚಾಮರಾಜ ನಗರ ಡಿಸಿ ಮಾಹಿತಿ

ಜನವರಿ 1ರಿಂದ 10ನೇ ತರಗತಿ ಹಾಗೂ ಪಿಯುಸಿ ತರಗತಿಗಳನ್ನು ಆರಂಭಿಸುವ ಜೊತೆಗೆ 6 ರಿಂದ 9ನೇ ತರಗತಿಯ ಮಕ್ಕಳಿಗೆ ಶಾಲೆಯ ಆವರಣದಲ್ಲಿಯೇ ವಿದ್ಯಾಗಮವನ್ನು ಪಾಳಿ ವ್ಯವಸ್ಥೆಯಲ್ಲಿ ಆರಂಭಿಸಲು ಸೂಕ್ತ ಮಾರ್ಗ ಸೂಚಿಯನ್ನು ರೂಪಿಸಲಾಗಿದೆ ಎಂದು ಚಾಮರಾಜನಗರ ಜಿ.ಪಂ ಸಿಇಒ ತಿಳಿಸಿದ್ದಾರೆ.

Chamarajnagar DC reaction about School reopen
ಜಿಪಂ ಸಿಇಒ ಭೋಯರ್

By

Published : Dec 24, 2020, 8:09 PM IST

ಚಾಮರಾಜನಗರ : ಸರ್ಕಾರದ ನಿರ್ದೇಶನದಂತೆ ಜನವರಿ 1 ರಿಂದ ಜಿಲ್ಲೆಯಲ್ಲಿ ಎಲ್ಲ ಶಾಲಾ – ಕಾಲೇಜುಗಳು ಹಾಗೂ ಎರಡನೇ ಹಂತದ ವಿದ್ಯಾಗಮ ಆರಂಭಕ್ಕೆ ಜಿಲ್ಲಾ ಪಂಚಾಯತ್​ ವತಿಯಿಂದ ಸಕಲ ಸಿದ್ದತೆ ಕೈಗೊಳ್ಳಲಾಗಿದೆ ಎಂದು ಜಿ.ಪಂ ಸಿಇಒ ಹರ್ಷಲ್ ಬೋಯರ್ ನಾರಾಯಣರಾವ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ. 1ರಿಂದ 10ನೇ ತರಗತಿ ಹಾಗೂ ಪಿಯುಸಿ ತರಗತಿಗಳನ್ನು ಆರಂಭಿಸುವ ಜೊತೆಗೆ 6 ರಿಂದ 9ನೇ ತರಗತಿಯ ಮಕ್ಕಳಿಗೆ ಶಾಲೆಯ ಆವರಣದಲ್ಲಿಯೇ ವಿದ್ಯಾಗಮವನ್ನು ಪಾಳಿ ವ್ಯವಸ್ಥೆಯಲ್ಲಿ ಆರಂಭಿಸಲು ಸೂಕ್ತ ಮಾರ್ಗ ಸೂಚಿಯನ್ನು ರೂಪಿಸಲಾಗಿದೆ. ಬೆಳಗ್ಗೆ 10 ರಿಂದ ಮಧ್ಯಾಹ್ನ 12.30ರ ವರೆಗೆ 10 ನೇ ತರಗತಿಗಳನ್ನು ಹಾಗೂ ಬೆಳಗ್ಗೆ 10 ರಿಂದ 4.30ರವರೆಗೆ ಪಿಯುಸಿ ತರಗತಿಗಳನ್ನು ಅಗತ್ಯ ಮುನ್ನೆಚ್ಚರಿಕೆ ಕ್ರಮವಹಿಸಿ ನಡೆಸಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಜಿ.ಪಂ ಸಿಇಒ ಹರ್ಷಲ್ ಬೋಯರ್ ನಾರಾಯಣರಾವ್

ಓದಿ : ಉ.ಕನ್ನಡದಲ್ಲಿ ಶಾಲೆ ಪ್ರಾರಂಭಕ್ಕೆ ಸಿದ್ಧತೆ: ಪಾಲಕರೇ ಇಲ್ಲಿದೆ ಮಹತ್ವದ ಮಾಹಿತಿ..

ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಎಲ್ಲಾ ಶಾಲೆಗಳಿಂದ 10ನೇ ತರಗತಿಯಲ್ಲಿ 11,940 ವಿದ್ಯಾರ್ಥಿಗಳಿದ್ದು, ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ 61 ಪದವಿ ಪೂರ್ವ ಕಾಲೇಜುಗಳಲ್ಲಿ 13,486 ವಿದ್ಯಾರ್ಥಿಗಳಿದ್ಧಾರೆ. 6 ರಿಂದ 9ನೇ ತರಗತಿಯವರೆಗೆ ವಿದ್ಯಾಗಮಕ್ಕೆ ಬರುವ ಮಕ್ಕಳಿಗೆ ಹಾಗೂ ಶಾಲಾ - ಕಾಲೇಜುಗಳಿಗೆ ಬರುವ 10ನೇ ತರಗತಿಯ ಹಾಗೂ ಪಿಯುಸಿ ಮಕ್ಕಳಿಗೆ ಹಾಜರಾತಿ ಕಡ್ಡಾಯವಾಗಿರುವುದಿಲ್ಲ. ವಿದ್ಯಾಗಮ ಹಾಗೂ ಶಾಲಾ - ಕಾಲೇಜುಗಳಿಗೆ ಬರುವ ಮಕ್ಕಳು ಪಾಲಕರ ಸಹಮತಿ ಮತ್ತು ಒಪ್ಪಿಗೆ ಪತ್ರವನ್ನು ಪಡೆಯುವ ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿ ತರಗತಿಗಳಿಗೆ ಬರಬೇಕು. ಜ್ವರ, ಕೆಮ್ಮು, ನೆಗಡಿಯಂತಹ ಲಕ್ಷಣಗಳಿರುವ ಮಕ್ಕಳು ಶಾಲಾ-ಕಾಲೇಜಿಗೆ ಹಾಗೂ ವಿದ್ಯಾಗಮಕ್ಕೆ ಹಾಜರಾಗುವಂತಿಲ್ಲ. ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾದ ಬಳಿಕ ತರಗತಿಗಳಿಗೆ ಆಗಮಿಸುವುದು ಸೂಕ್ತ ಎಂದರು.

ಮೊದಲಿನಂತೆ ಶಾಲೆಗಳಲ್ಲಿ ಅಕ್ಷರದಾಸೋಹ ಹಾಗೂ ಹಾಲು ವಿತರಣೆ ವ್ಯವಸ್ಥೆ ಇರುವುದಿಲ್ಲ. ಬದಲಾಗಿ ವಿದ್ಯಾರ್ಥಿಗಳ ಮನೆಗೆ ಆಹಾರ ಧಾನ್ಯಗಳನ್ನು ವಿತರಿಸಲಾಗುವುದು. ಅಲ್ಲದೇ ಶಾಲಾ-ಕಾಲೇಜುಗಳಲ್ಲೇ ಮಕ್ಕಳಿಗೆ ಬಿಸಿನೀರು ನೀಡುವ ವ್ಯವಸ್ಥೆ ಇರಲಿದೆ ಎಂದು ಎಂದು ಹೇಳಿದರು.

ABOUT THE AUTHOR

...view details