ಕರ್ನಾಟಕ

karnataka

ETV Bharat / state

ಚಾಮರಾಜನಗರದಲ್ಲಿ ಸಾವಿರ ದಾಟಿದ ಸೋಂಕಿತರು, 3 ಸಾವು, 38 ಮಂದಿ ಗುಣಮುಖ - ಕೋವಿಡ್ 19 ಅಪ್​ಡೇಟ್

ಇಂದು ಪತ್ತೆಯಾದ ಸೋಂಕಿತರಲ್ಲಿ ಕೊಳ್ಳೇಗಾಲ ತಾಲೂಕಿನ 12, ಚಾಮರಾಜನಗರದ 23, ಗುಂಡ್ಲುಪೇಟೆಯ 11, ಯಳಂದೂರು 5 ಹಾಗೂ ಹನೂರು ತಾಲೂಕಿನ 5 ಮಂದಿ ಇದ್ದಾರೆ..

ಚಾಮರಾಜನಗರದಲ್ಲಿ ಸಾವಿರ ದಾಟಿದ ಸೋಂಕಿತರು
ಚಾಮರಾಜನಗರದಲ್ಲಿ ಸಾವಿರ ದಾಟಿದ ಸೋಂಕಿತರು

By

Published : Aug 7, 2020, 6:43 PM IST

Updated : Aug 7, 2020, 11:53 PM IST

ಚಾಮರಾಜನಗರ : ಜಿಲ್ಲೆಯಲ್ಲಿ ಇಂದು 53 ಕೋವಿಡ್ ಪಾಸಿಟಿವ್ ಕೇಸ್ ದೃಢಪಡುವ ಮೂಲಕ ಸೋಂಕಿತರ ಸಂಖ್ಯೆ 1043 ಆಗಿದೆ. ಮೂವರು ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ.

ಇಂದು 38 ಮಂದಿ ಬಿಡುಗಡೆಯಾಗಿದ್ರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 393 ಆಗಿದೆ. 637 ಮಂದಿ ಮೇಲೆ ಆರೋಗ್ಯ ಇಲಾಖೆ ನಿಗಾ ಇರಿಸಿದೆ‌. ಇಂದಿನ ಸೋಂಕಿತರಲ್ಲಿ 17ಐಎಲ್ಐ ಕೇಸ್‌ನವರಾಗಿದ್ದಾರೆ. 2, 4, 10, 80, 75 ವರ್ಷ ವಯೋಮಾನದವರಿಗೆ ಸೋಂಕು ತಗುಲಿದೆ. ಕೋವಿಡ್ ಆಸ್ಪತ್ರೆಯ ಐಸಿಯುನಲ್ಲಿ 13 ಮಂದಿ ದಾಖಲಾಗಿದ್ದಾರೆ.

ಮೂವರ ಸಾವು :ಕೊಳ್ಳೇಗಾಲದ 57 ವರ್ಷದ ವ್ಯಕ್ತಿ ಸೋಂಕಿತರಾಗಿ ಆ.1ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಗುರುವಾರ ರಾತ್ರಿ ಮೃತಪಟ್ಟಿದ್ದಾರೆ. ಚಾಮರಾಜನಗರ ತಾಲೂಕಿನ ಮೆಲ್ಲಾಜಿಪುರದ 75 ವರ್ಷದ ವೃದ್ಧರೊಬ್ಬರು ಗ್ಯಾಂಗ್ರೀನ್​​ಗೆ ತುತ್ತಾಗಿ ಜಿಲ್ಲಾಸ್ಪತ್ರೆಯ ಒಳರೋಗಿಯಾಗಿದ್ದರು. ಗುರುವಾರ ಅವರು ಮೃತಪಟ್ಟಿದ್ದು, ಅವರಿಗೆ ಕೋವಿಡ್ ಇರುವುದು ದೃಢವಾಗಿದೆ.

ಕೆಜಿಎಫ್​​​ನಿಂದ ಬಂದಿದ್ದ 55 ವರ್ಷದ ಕ್ಯಾನ್ಸರ್ ರೋಗಿಯೊಬ್ಬರು ಗುಂಡ್ಲುಪೇಟೆಯ ಸಂಬಂಧಿಕರ ಮನೆಗೆ ಬಂದು ಸಾವನ್ನಪ್ಪಿದ್ದಾರೆ. ಇವರಿಗೂ ಕೊರೊನಾ ಇರುವುದು ಖಾತ್ರಿಯಾಗಿದೆ. ಇಂದು ಪತ್ತೆಯಾದ ಸೋಂಕಿತರಲ್ಲಿ ಕೊಳ್ಳೇಗಾಲ ತಾಲೂಕಿನ 12, ಚಾಮರಾಜನಗರದ 23, ಗುಂಡ್ಲುಪೇಟೆಯ 11, ಯಳಂದೂರು 5 ಹಾಗೂ ಹನೂರು ತಾಲೂಕಿನ 5 ಮಂದಿ ಇದ್ದಾರೆ.

Last Updated : Aug 7, 2020, 11:53 PM IST

ABOUT THE AUTHOR

...view details