ಚಾಮರಾಜನಗರ:ಹಾಸ್ಯದಿಂದ ಕೂಡಿರುವ ರಜೆ ಅರ್ಜಿಗಳು ವೈರಲ್ ಆಗುವಂತೆ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರ ರಜಾ ಅರ್ಜಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಹೌದು, ಆರೋಗ್ಯ ಸಮಸ್ಯೆ, ಪ್ರವಾಸ, ವೈಯಕ್ತಿಕ ಕಾರಣಗಳಿಗೆ ರಜೆ ಕೇಳುವುದು ಸಾಮಾನ್ಯ. ಆದರೆ, ಹನೂರು ತಾಲೂಕಿನ ರಾಮಾಪುರ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಒಬ್ಬರು "ತಾನು ಅವಿವಾಹಿತನಾಗಿದ್ದು, ವಧುವಿನ ಹುಡುಕಾಟದಲ್ಲಿರುವುದರಿಂದ ದಿನಾಂಕ್ 11-13 ಎರಡು ದಿನ ಆಕಸ್ಮಿಕ ರಜೆ, 14 ರಂದು ವಾರದ ರಜೆ ಕೊಡಬೇಕೆಂದು ರಜಾ ಅರ್ಜಿ ಬರೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇಂದಿನ ದಿನಾಂಕ ಅರ್ಜಿಯಲ್ಲಿ ನಮೂದಾಗಿದ್ದು ಪೊಲೀಸ್ ಇನ್ಸ್ಪೆಕ್ಟರ್ ಅವರ ಸಹಿಯಾಗಲಿ, ಮೊಹರಾಗಲಿ ಇಲ್ಲ. ಆದರೆ, ಕಾನ್ಸ್‌ಟೇಬಲ್ ಸಹಿ ಇದೆ.